ನ್ಯೂಯಾರ್ಕ್, 25 ಫೆಬ್ರವರಿ :
ಆ್ಯಂಕರ್ : ನ್ಯೂಯಾರ್ಕ್-ಮ್ಯಾನ್ ಹ್ಯಾಟನ್ ನ ಅಪಾರ್ಟ್ ಮೆಂಟ್ ನ ಕಟ್ಟಡದಲ್ಲಿ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಫಾಜಿಲ್ ಖಾನ್(27) ನ್ಯೂಯಾರ್ಕ್ ಮೂಲದ ಮಾಧ್ಯಮ ಕಂಪನಿ ದಿ ಹೆಚಿಂಗರ್ ಸುದ್ದಿಮಾಧ್ಯಮ ದಲ್ಲಿ ಪತ್ರಕರ್ತರಾಗಿದ್ದರು. ಮತ್ತು ಎಕ್ಸ್ ನಲ್ಲಿನ ಅವರ ಪ್ರೊಫೈಲ್ ಪ್ರಕಾರ, ಅವರು ಕೊಲಂಬಿಯಾ ಜರ್ನಲಿಸಂ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದರು ಎಂಬುದು ಗೊತ್ತಾಗಿದೆ.
ಬೆಂಕಿ ಅವಘಡದಲ್ಲಿ ಭಾರತೀಯ ಪ್ರಜೆ ಫಾಜಿಲ್ ಖಾನ್ ಸಾವಿನ ಸುದ್ದಿ ದುಃಖ ತಂದಿದೆ. ಖಾನ್ ಅವರ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾನ್ಸುಲೇಟ್ ಸಂಪರ್ಕದಲ್ಲಿದ್ದು, ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಹಿಂದಿರುಗಿಸಲು ನಾವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದನ್ನು ಮುಂದುವರಿಸುತ್ತೇವೆ. ಅವರ ಪಾರ್ಥಿವ ಶರೀರವನ್ನು ಭಾರತದಲ್ಲಿರುವ ಅವರ ಕುಟುಂಬಕ್ಕೆ ತಲುಪಿಸಲು ಸಾಧ್ಯವಿರುವ ಎಲ್ಲ ನೆರವನ್ನು ನೀಡಲಾಗುತ್ತಿದೆ ಎಂದು ನ್ಯೂಯಾರ್ಕ್ ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ತಿಳಿಸಿದ್ದಾರೆ.
ಅಂತಹ ಮಹಾನ್ ಸಹೋದ್ಯೋಗಿ ಮತ್ತು ಅದ್ಭುತ ವ್ಯಕ್ತಿಯನ್ನು ಕಳೆದುಕೊಂಡು ನಾವು ಜರ್ಜರಿತಾಗಿದ್ದೇವೆ. ಅವನು ತುಂಬಾ ಮಿಸ್ ಆಗುತ್ತಾನೆ ಎಂದು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
