ಬೆಂಗಳೂರು, 3 ಮಾರ್ಚ್ :
ನಿನ್ನೆ ರಾತ್ರಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ೭ ವಿಕೆಟ್ಗಳಿಂದ ಸೋಲಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೀಡಿದ ೧೩೨ ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಕೇವಲ ೧೫.೧ ಓವರ್ ಗಳಲ್ಲಿ ಕೇವಲ ೩ ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮುಂಬೈ ಇಂಡಿಯನ್ಸ್ ಪರ ಅಮೆಲಿಯಾ ಕೆರ್ ೪೦ ರನ್, ಯಾಸ್ತಿಕಾ ಭಾಟಿಯಾ ೩೧ ರನ್, ನ್ಯಾಟ್ ಸಿವರ್-ಬ್ರಂಟ್, ೨೭ ಮತ್ತು ಹೇಲಿ ಮ್ಯಾಥ್ಯೂಸ್ ೨೬ ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ ೨೦ ಓವರ್ಗಳಲ್ಲಿ ೬ ವಿಕೆಟ್ಗೆ ೧೩೧ ರನ್ ಗಳಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಲ್ಲಿಸ್ ಪೆರ್ರಿ ಅಜೇಯ ೪೪ ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಅಮೆಲಿಯಾ ಕೆರ್ ಅವರನ್ನು ಪಂದ್ಯದ ಆಟಗಾರ್ತಿ ಎಂದು ಘೋಷಿಸಲಾಯಿತು. ಇಂದು ಇದೇ ಮೈದಾನದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಪಂದ್ಯ ಭಾರತೀಯ ಕಾಲಮಾನ ಸಂಜೆ ೭.೩೦ ಕ್ಕೆ ಆರಂಭವಾಗಲಿದೆ.
