ಶ್ರೀನಗರ್, 18 ಫೆಬ್ರವರಿ : ಆ್ಯಂಕರ್:
ಜಮ್ಮು-ಕಾಶ್ಮೀರದ ಉಧಮ್ ಪುರ್- ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಪ್ರಮುಖ ಭಾಗವಾದ ೪೮ ಪಾಯಿಂಟ್ ೫ ಕಿಲೋಮೀಟರ್ ಉದ್ದದ ಬನಿಹಾಲ್-ಖಾರಿ-ಸುಂಬೆರ್-ಸಂಗಲ್ ದನ್ ವಿಭಾಗದಲ್ಲಿ ರೈಲು ಸೇವೆ ಇದೇ ೨೦ ರಂದು ಆರಂಭವಾಗಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ನೂತನ ಮಾರ್ಗದ ಉದ್ಘಾಟನೆಯನ್ನು ನೆರವೇರಿಸುವ ನಿರೀಕ್ಷೆಯಿದೆ. ಬನಿಹಾಲ್-ಖಾರಿ-ಸುಂಬೆರ್-ಸಂಗಲ್ದನ್ ಮಾರ್ಗವನ್ನು ೧೫ ಸಾವಿರದ ೮೬೩ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ೧೧ ಬೃಹತ್ ಸೇತುವೆ ಸೇರಿದಂತೆ ೧೬ ಸೇತುವೆಗಳನ್ನು ಒಳಗೊಂಡಿದೆ. ಈ ವಿಭಾಗದ ಶೇಕಡ ೯೦ಕ್ಕೂ ಹೆಚ್ಚು ಮಾರ್ಗ, ಸುರಂಗಗಳನ್ನು ಒಳಗೊಂಡಿದೆ. ೧೧ ಸುರಂಗಳು ೪೩ ಪಾಯಿಂಟ್ ೩೭ ಕಿಲೋಮೀಟರ್ ಮಾರ್ಗವನ್ನು ವ್ಯಾಪಿಸಿದೆ.
