ನವದೆಹಲಿ, 18 ಫೆಬ್ರವರಿ :
ಆ್ಯಂಕರ್:ಗ್ರೀಸ್ ಪ್ರಧಾನಮಂತ್ರಿ ಕ್ಯಾರಿಯಾ ಕೋಸ್ ಮಿಟ್ಸೊ ಟಕಿಸ್ ಅವರು, ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಇದೇ ೨೧ ರಂದು ಆಗಮಿಸಲಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ೯ನೇ ರೈಸಿನಾ ಮಾತುಕತೆಯ ಕಾರ್ಯಕ್ರಮದಲ್ಲಿ ಅವರು, ಪ್ರದಾನ ಭಾಷಣ ಮಾಡಲಿದ್ದಾರೆ. ಉನ್ನತ ಮಟ್ಟದ ವ್ಯಾಪಾರಿ ನಿಯೋಗ ಹಾಗೂ ಅಧಿಕಾರಿಗಳೊಂದಿಗೆ ಆಗಮಿಸಲಿರುವ ಗ್ರೀಸ್ ಪ್ರಧಾನಿ ಅವರು, ಮುಂಬೈಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಗ್ರೀಸ್ ಪ್ರಧಾನಮಂತ್ರಿ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗ್ರೀಸ್ ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಅತಿಥಿಗಳ ಗೌರವಾರ್ಥ ಔತಣಕೂಟವನ್ನು ಏರ್ಪಡಿಸಲಾಗಿದೆ. ಇದು ೧೫ ವರ್ಷಗಳ ನಂತರ ಗ್ರೀಸ್ ಪ್ರಧಾನಿಯೊಬ್ಬರು ಭಾರತಕ್ಕೆ ನೀಡುತ್ತಿರುವ ಭೇಟಿಯಾಗಿದೆ.
