ಮುಂಬೈ, 10 ಫೆಬ್ರವರಿ :
ನಟ ಧರ್ಮೇಂದ್ರ ಅವರು ಬಾಲಿವುಡ್ನ ಬೇಡಿಕೆಯ ನಾಯಕ ನಟ ಆಗಿದ್ದರು. 60 ದಶಕದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗಲೂ ನಟನೆ ಮುಂದವರಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಅವರು ಈಗ ಗಮನ ಸೆಳೆಯುತ್ತಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕ ಅವರು ಹೆಸರು ಬದಲಿಸಿಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ನಿನ್ನೆ ಬಿಡುಗಡೆ ಆದ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ. ಈ ಚಿತ್ರದಲ್ಲಿ ಧರ್ಮೇಂದ್ರ ಅವರು ನಟಿಸಿದ್ದಾರೆ.
ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ನಟನೆಯ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾದಲ್ಲಿ ಧರ್ಮೇಂದ್ರ ಅವರು ನಟಿಸಿದ್ದಾರೆ. ಕಥಾ ನಾಯಕ ಶಾಹಿದ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಹೆಸರನ್ನು ಬೇರೆ ರೀತಿಯಲ್ಲಿ ತೋರಿಸಲಾಗಿದೆ.
ಈ ಮೊದಲು ಸಿನಿಮಾಗಳಲ್ಲಿ ಧರ್ಮೇಂದ್ರ ಎಂದಷ್ಟೇ ಬರುತ್ತಿತ್ತು. ಈಗ ಸಿನಿಮಾ ಪ್ರದರ್ಶನದ ವೇಳೆ ಧರ್ಮೇಂದ್ರ ಸಿಂಗ್ ಡಿಯೋಲ್ ಎಂದು ಹೆಸರು ತೋರಿಸಲಾಗಿದೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಚಿತ್ರರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕ ಅವರು ಈ ರೀತಿ ಮಾಡಿದ್ದು ಅನೇಕರಿಗೆ ಅಚ್ಚರಿ ಮೂಡಿಸಿದೆ.
