ನವದೆಹಲಿ, 12 ಫೆಬ್ರವರಿ :
ಆ್ಯಂಕರ್:
ಶ್ರೀಲಂಕಾ ಮತ್ತು ಮಾರಿಷಿಯಸ್ ಗಳಲ್ಲಿ ಯುಪಿಐ ಸೇವೆ ಹಾಗೂ ಮಾರಿಶಿಯಸ್ನಲ್ಲಿ ರುಪೇ ಕಾರ್ಡ್ ಸೇವೆಗಳಿಗೆ ಇಂದು ಚಾಲನೆ ದೊರಕಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಶ್ರೀಲಂಕಾ ಅಧ್ಯಕ್ಷ ರಣಿಲ್ ವಿಕ್ರಂಸಿಂಘೆ ಮಾರಿಶಿಯಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರಿಂದ ಶ್ರೀಲಂಕಾ ಮತ್ತು ಮಾರಿಶಿಯಸ್ಗಳಲ್ಲಿ ಪ್ರವಾಸ ಕೈಗೊಳ್ಳುವ ಭಾರತೀಯರು ಹಾಗೂ ಭಾರತದಲ್ಲಿ ಪ್ರವಾಸ ಕೈಗೊಳ್ಳುವ ಮಾರಿಶಿಯಸ್ ಜನರಿಗೆ ಯುಪಿಐ ಸೇವೆ ದೊರಕಲಿದೆ. ಮಾರಿಶಿಯಸ್ಗೆ ರುಪೇ ಕಾರ್ಡ್ ಸೇವೆ ವಿಸ್ತರಣೆಯಿಂದಾಗಿ ಅಲ್ಲಿನ ಬ್ಯಾಂಕ್ ಗಳಿಗೆ ಕಾರ್ಡ್ಗಳನ್ನು ನೀಡಲು ಅವಕಾಶವಾಗುತ್ತಿದ್ದು, ಇದನ್ನು ಭಾರತ ಮತ್ತು ಮಾರಿಶಿಯಸ್ ಎರಡರಲ್ಲೂ ಬಳಸಬಹುದಾಗಿದೆ.
