ನವದಹೆಲಿ, 10 ಫೆಬ್ರವರಿ :
ಆ್ಯಂಕರ್ :ವಿವಾದಗಳ ನಡುವೆ ಪೇಟಿಎಂನ ಇಕಾಮರ್ಸ್ ವಿಭಾಗದ ಹೆಸರು ಪೈ ಪ್ಲಾಟ್ಫಾರ್ಮ್ಸ್ ಎಂದು ಬದಲಾಗಿದೆ. ಹಾಗೆಯೇ, ಬಿಟ್ಸಿಲಾ ಎಂಬ ಆ್ಯಪ್ ಅನ್ನೂ ಪೇಟಿಎಂ ಖರೀದಿಸಿದೆ. ಬಿಟ್ಸಿಲಾ ಎಂಬುದು ಒಎನ್ಡಿಸಿ ವ್ಯವಸ್ಥೆಯಲ್ಲಿ ಸೆಲ್ಲರ್ ಆ್ಯಪ್ ಅಥವಾ ಮಾರಾಟಗಾರರಿಗೆ ವೇದಿಕೆಯಾಗಿರುವ ಅಪ್ಲಿಕೇಶನ್ ಆಗಿದೆ. ಪೇಟಿಎಂ ಇ-ಕಾಮರ್ಸ್ನ ಹೆಸರನ್ನು ಪೈ ಪ್ಲಾಟ್ಫಾರ್ಮ್ಸ್ ಆಗಿ ಬದಲಾಯಿಸುವ ನಿರ್ಧಾರ ದಿಢೀರ್ ಆಗಿದ್ದಲ್ಲ. ಪಿಟಿಐ ವರದಿ ಪ್ರಕಾರ, ಮೂರು ತಿಂಗಳ ಹಿಂದೆಯೇ ಹೆಸರು ಬದಲಾವಣೆಗೆ ಪೇಟಿಎಂ ಅರ್ಜಿ ಹಾಕಿತ್ತು. ಕಂಪನಿ ರಿಜಿಸ್ಟ್ರಾರ್ನಿಂದ ಅನುಮೋದನೆ ಕೂಡ ಸಿಕ್ಕಿತ್ತು.
‘ಪೇಟಿಎಂ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಇದ್ದ ಕಂಪನಿ ಹೆಸರನ್ನು ಪೈ ಪ್ಲಾಟ್ಫಾರ್ಮ್ಸ್ ಪ್ರೈವೇಟ್ ಲಿಮಿಟೆಡ್ ಎಂದು ಬದಲಾಯಿಸಲಾಗಿದೆ’ ಎಂದು ಪ್ರಾಧಿಕಾರ ಸಂಸ್ಥೆಯಾದ ಕಂಪನಿ ರಿಜಿಸ್ಟ್ರಾರ್ ತನ್ನ ನೋಟಿಫಿಕೇಶನ್ನಲ್ಲಿ ತಿಳಿಸಿದೆ.
