ರಾಯಚೂರು, 7 ಫೆಬ್ರವರಿ :
ಆ್ಯಂಕರ್: ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಫೆ.06ರಂದು ಗಬ್ಬೂರು ಗ್ರಾಮದಲ್ಲಿ ಅದ್ದೂರಿಯಾಗಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ನಂತರ ಫೆ.7ರಂದು ಶಾವಂತಗೇರಾ ಗ್ರಾಮ ಪಂಚಾಯತಿಗೆ ಸಂವಿಧಾನ ಜಾಗೃತಿ ಜಾಥವನ್ನು ಹಸ್ತಾಂತರಿಸಲಾಯಿತು. ಶಾವಂತಗೇರಾ ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರು ಶಾಲಾ ಮಕ್ಕಳಿಂದ ಕಳಸ ಕುಂಭಗಳನ್ನೊತ್ತು, ಸಂವಿಧಾನಪರ ಘೋಷಣೆಗಳನ್ನು ಹಾಕುತ್ತ ಅದ್ದೂರಿಯಾಗಿ ಜಾಥವನ್ನು ಸ್ವಾಗತಿಸಿದರು.
ಶಾವಂತಗೇರಾ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥವನ್ನು ಮುಗಿಸಿ ಹೇಮನಾಳ, ಹಿರೆಬೂದೂರು, ಗೂಗಲ್, ಕೊಪ್ಪರ, ಜೇರಬಂಡಿ(ಎಸ್), ದೊಂಡಬಂಡಿ(ಎಸ್) ಗ್ರಾಮ ಪಂಚಾಯತಿಯಲ್ಲಿ ಸಂಚಾರವನ್ನು ಮುಂದುವರೆಸಿತು ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥದ ಸ್ಥಬ್ಧ ಚಿತ್ರಕ್ಕೆ ಮಾರ್ಲಾಣೆ ಮಾಡುವುದರ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು.
ದೊಂಡಬಂಡಿ ಗ್ರಾಮ ಪಂಚಾಯತಿಯಿಂದ ದೇವದುರ್ಗ ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥವನ್ನು ದೇವದುರ್ಗ ತಾಲೂಕು ಪಂಚಾಯತಿಯಿಂದ ಅತ್ಯಂತ ಅದ್ದೂರಿಯಿಂದ ಸ್ವಾಗತಿಸಿ, ತಹಶೀಲ್ದಾರರು, ತಾಲೂಕು ಪಂಚಾಯತಿ ಅಧಿಕಾರಿಗಳು, ಪಟ್ಟಣದ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಶಾಲಾ ಮಕ್ಕಳು, ಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸ್ಥಬ್ಧಚಿತ್ರದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ, ಭಾವಚಿತ್ರಕ್ಕೆ ಹಾಗೂ ಸಂವಿಧಾನ ಪೀಠಿಕೆಗೆ ಪೂಜೆ ಸಲ್ಲಿಸಿ, ಸಂವಿಧಾನ ಪೀಠಿಕೆ ವಾಚನ ಮಾಡಿದರು.
ದೇವದುರ್ಗದಲ್ಲಿ ಎಲ್.ಇ.ಡಿ ಪರದೆಯ ಮೂಲಕ ಸಂವಿಧಾನದ ಕುರಿತು ವಿಡಿಯೋ ಕ್ಲಿಪಿಂಗ್ಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
