• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಓದುವ ಸಂಸ್ಕೃತಿ ಉಳಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು : ಶಾಂತಕುಮಾರಿ
Regional

ಓದುವ ಸಂಸ್ಕೃತಿ ಉಳಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು : ಶಾಂತಕುಮಾರಿ

CliQ INDIA
Last updated: October 13, 2025 1:25 pm
CliQ INDIA
Share
3 Min Read
SHARE

ಬೆಂಗಳೂರು, 12 ಅಕ್ಟೋಬರ್ (ಹಿ.ಸ.) :

ಆ್ಯಂಕರ್ :

‘ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕನ್ನಡದ ವಾತಾವರಣ ಮತ್ತೆ ನೆಲೆಸಬೇಕು ಎಂದು ಹಿರಿಯ ಲೇಖಕಿ, ವಿಮರ್ಶಕಿ, ಅನುವಾದಕಿ ಪ್ರೊ. ಎಲ್. ವಿ. ಶಾಂತಕುಮಾರಿ‌ ಅವರು ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ 2025ನೇ ಸಾಲಿನ ಆದಿಕವಿ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು.

ನವೋದಯ ಕಾಲದ ಎಲ್ಲ ಮುಖ್ಯ ಕವಿಗಳು ಮತ್ತು ಲೇಖಕರು ಇಂಗ್ಲಿಷ್ ಚೆನ್ನಾಗಿ ಓದಿಕೊಂಡಿದ್ದರು. ಅದನ್ನು ಕನ್ನಡಕ್ಕೆ ಪೂರಕವಾಗಿ ಬಳಸಿಕೊಂಡರು. ಅದು ನಮಗೆ ಮಾದರಿಯಾಗಬೇಕು.

ನಮ್ಮ ಕನ್ನಡದ ಮೇಷ್ಟ್ರುಗಳು ಶಾಲೆಗಳಲ್ಲಿ ಕುಮಾರವ್ಯಾಸ ಭಾರತದಂಥ ಪದ್ಯಗಳನ್ನು ಓದಿಸುತ್ತಿದ್ದರು. ನನ್ನ ಮನೆಯಲ್ಲಿ ಗೌರಿ ಹಬ್ಬದ ಉಡುಗೊರೆಯಾಗಿ ಪುಸ್ತಕಗಳನ್ನು ಕೊಡುತ್ತಿದ್ದರು. ನನ್ನಲ್ಲಿ ಸಾಹಿತ್ಯ ಆಸಕ್ತಿ ಬೆಳೆಯಲು ಇವೆಲ್ಲವೂ ಕಾರಣವಾಯಿತು ಎಂದರು.

2025ನೇ ಸಾಲಿನ ವಾಗ್ದೇವಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಕವಿ, ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರು, ಅಕ್ಷರ ಕಲಿತವರೆಲ್ಲರೂ ವಿದ್ಯಾವಂತರಲ್ಲ. ಕೇವಲ ಅಕ್ಷರ ಕಲಿತವರು ವ್ಯವಹಾರ ಲೋಕದ ಪ್ರಜೆ ಆಗಬಹುದು. ಆದರೆ ವಿದ್ಯಾವಂತರು ಸಾಂಸ್ಕೃತಿಕ ಜಗತ್ತಿನ ಭಾಗವಾಗುತ್ತಾರೆ.

ನಾಲ್ಕು ಜನ ಎಲ್ಲಿಯೇ ಸೇರಿದರೂ ರಾಜಕೀಯದ ಚರ್ಚೆ ಆರಂಭವಾಗುತ್ತದೆ. ಈ ಪರಿಸ್ಥಿತಿ ಬದಲಾಗಬೇಕು. ಸಾಂಸ್ಕೃತಿಕ ನಾಯಕತ್ವ ಬೆಳೆಸುವ ಮೌಲಿಕ ಚರ್ಚೆಗಳು ನಮ್ಮ ನಡುವೆ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ವಾಗ್ದೇವಿ ಬಹುಮಾನದ ಪ್ರಾಯೋಜಕ ಹರೀಶ್ ಕೃಷ್ಣಮೂರ್ತಿ ಮಾತನಾಡಿ, ಅರ್ಹರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಿಗುವಂತೆ ಆಗಲು ಅಭಾಸಾಪ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.

ಮುಖ್ಯ ವಕ್ತಾರರಾಗಿ ಮಾತನಾಡಿದ ಅಭಾಸಾಪ ಕರ್ನಾಟಕ ಉಪಾಧ್ಯಕ್ಷ ರಮೇಶ್ ಭಟ್ ಬೆಳಗೋಡು, ಕಾಶ್ಮೀರದ ಶಾರದಾ ಪೀಠವು ಭಾರತದ ಜ್ಞಾನದ ಶಕ್ತಿ ಕೇಂದ್ರವಾಗಿತ್ತು. ಆದರೆ ಇಂದಿನ ಭೌಗೋಳಿಕ ರಾಜಕಾರಣದ ಪರಿಣಾಮ ಅದು ಭಾರತದಿಂದ ಹೊರಗಿದೆ. ನಾವೆಲ್ಲರೂ ಭಾರತೀಯರು ಆ ಸ್ಥಾನಗಳನ್ನು ಪುನಃ ಪಡೆಯುವ ಹಾಗೂ ಅಲ್ಲಿನ ಕಥೆಗಳನ್ನು ಮುಂದಿನ ಪೀಳಿಗೆಗಳಿಗೆ ವರ್ಗಾಯಿಸುವ ಕೆಲಸ ಮಾಡಬೇಕು ಎಂದರು.

ಅಭಾಸಾಪ ರಾಜ್ಯ ಸಂಪರ್ಕ ಪ್ರಮುಖ್ ರಘುನಂದನ್ ಭಟ್, ಅಭಾಸಾಪ ರಾಜ್ಯ ಘಟಕದ ಅಧ್ಯಕ್ಷ ಎಸ್.ಜಿ.ಕೋಟಿ ಬಾಗಲಕೋಟೆ, ಅಭಾಸಾಪ ಸಂಘಟನೆಯ ಪ್ರಮುಖರಾದ

ನಾರಾಯಣ ಶೆವಿರೆ, ರಘುನಂದನ್ ಭಟ್, ಎಂ.ಎಸ್. ನರಸಿಂಹಮೂರ್ತಿ ಇತರರು ಪಾಲ್ಗೊಂಡಿದ್ದರು.

ಪ್ರಶಸ್ತಿ ಮೊತ್ತ ವಾಪಸ್‌ವಾಗ್ದೇವಿ ಹಾಗೂ ಆದಿಕವಿ ಪುರಸ್ಕಾರಗಳು ತಲಾ 1 ಲಕ್ಷ ರೂ. ಮೊತ್ತ, ಪ್ರತಿಮೆ, ಫಲಕಗಳನ್ನು ಒಳಗೊಂಡಿವೆ. ವಾಗ್ದೇವಿ ಪುರಸ್ಕಾರ ಸ್ವೀಕರಿಸಿದ ಅರಬಗಟ್ಟೆ ಅಣ್ಣಪ್ಪ ಅವರು ತಮ್ಮ ಪ್ರಶಸ್ತಿ ಮೊತ್ತ 1 ಲಕ್ಷ ರೂ. ಅನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳಿಗಾಗಿ ವೇದಿಕೆಯಲ್ಲೇ ಘೋಷಿಸಿ, ಚೆಕ್‌ ಅನ್ನು ಹಸ್ತಾಂತರಿಸಿದರು. ಅಭಾಸಾಪ ರಾಜ್ಯ ಅಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸಂಘಟನೆಯ ಪರವಾಗಿ ಸ್ವೀಕರಿಸಿದರು.

ಪ್ರೊ ಎಲ್.ವಿ.ಶಾಂತಕುಮಾರಿ ಪರಿಚಯ

ತಿಪಟೂರು ಮೂಲದ ಪ್ರೊ ಎಲ್.ವಿ.ಶಾಂತಕುಮಾರಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 50 ಹೆಚ್ಚು ಕೃತಿಗಳನ್ನು ರಚಿಸಿರುವ ಶಾಂತಕುಮಾರಿ, ಗೃಹಭಂಗ, ದಾಟು, ಧರ್ಮಶ್ರೀ ಸೇರಿದಂತೆ ಹಲವು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇಂಗ್ಲಿಷಿನ ಹಲವು ಕೃತಿಗಳನ್ನು ಕನ್ನಡಕ್ಕೂ ತಂದಿದ್ದಾರೆ. ಸ್ವತಂತ್ರವಾಗಿಯೂ ಹಲವು ಕಥೆ, ಕವನಗಳನ್ನು ರಚಿಸಿದ್ದಾರೆ.

ಅರಬಗಟ್ಟೆ ಅಣ್ಣಪ್ಪ ಪರಿಚಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಅರಬಗಟ್ಟೆ ಗ್ರಾಮದ ಅಣ್ಣಪ್ಪ ಪ್ರಸ್ತುತ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಜಾತ್ರೆಗೆ ನುಗ್ಗಿದ ಮಗು’ ಕವನ ಸಂಕಲನ, ‘ಅಕ್ಕಡಿ’ ಪ್ರಬಂಧ ಸಂಕಲನ ಪ್ರಕಟವಾಗಿದೆ. ಹಲವು ಪತ್ರಿಕೆಗಳಲ್ಲಿ ಇವರ ನೂರಾರು ಕಥೆ, ಕವನ, ಪ್ರಬಂಧಗಳು ಪ್ರಕಟವಾಗಿವೆ.

ಫೋಟೊ :

ಬೆಂಗಳೂರಿನ ಗಾಂಧಿ ಭವನದಲ್ಲಿ ಭಾನುವಾರ (ಅ 12) ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಲೇಖಕಿ ಪ್ರೊ ಎಲ್.ವಿ.ಶಾಂತಕುಮಾರಿ ಮತ್ತು ಕವಿ ಅರಬಗಟ್ಟೆ ಅಣ್ಣಪ್ಪ ಅವರಿಗೆ ಕ್ರಮವಾಗಿ ‘ಆದಿಕವಿ’ ಮತ್ತು ‘ವಾಗ್ದೇವಿ’ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ

You Might Also Like

ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ – Hindusthan Samachar Kannada
ಸಿದ್ದರಾಮಯ್ಯರಿಂದ ಸಾಮಾಜಿಕ ಅನ್ಯಾಯ : ಬಸವರಾಜ ಬೊಮ್ಮಾಯಿ
ಬಳ್ಳಾರಿ : ದೇವಿ ಪುರಾಣದ ವೇದಿಕೆಯಲ್ಲಿ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ
ವಿಕಲಚೇತನರ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಶನಿವಾರದ ರಾಶಿ ಫಲ – Hindusthan Samachar Kannada

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಗಾಜಾ–ಇಸ್ರೇಲ್ ಕದನ ವಿರಾಮ : ಶಾಂತಿ, ನೆರವು ಚಟುವಟಿಕೆ ಪ್ರಾರಂಭ
Next Article ಸೋಮವಾರದ ರಾಶಿ ಫಲ – Hindusthan Samachar Kannada
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?