
ದೆಹಲಿ, 21 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ದೆಹಲಿಯ ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಸೋಮವಾರ ಅರ್ಧ ದಿನ ಮುಚ್ಚಲ್ಪಡುತ್ತವೆ. ಅಧಿಕೃತ ಆದೇಶದ ಪ್ರಕಾರ, ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮಧ್ಯಾಹ್ನ ೨:೩೦ ರವರೆಗೆ ಮುಚ್ಚಲ್ಪಡುತ್ತವೆ. ಮತ್ತು ತುರ್ತು ಸೇವೆಗಳ ವಿಭಾಗ ಕಾರ್ಯ ನಿರ್ವಹಿಸುತ್ತದೆ. ದೆಹಲಿಯ ಎರಡು ಪ್ರಮುಖ ವೈದ್ಯಕೀಯ ಸಂಸ್ಥೆಗಳಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ – ಏಮ್ಸ್ ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗಳು ಅರ್ಧ ದಿನ ಮುಚ್ಚಲ್ಪಡುತ್ತವೆ. ದೆಹಲಿಯ ಏಮ್ಸ್ ಆಸ್ಪತ್ರೆಯು ಅಯೋಧ್ಯೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ಸಂದರ್ಭದಲ್ಲಿ ಜನವರಿ ೨೨ ಅಂದರೆ ನಾಳೆ ಮಧ್ಯಾಹ್ನ ೨:೩೦ ರವರೆಗೆ ಅರ್ಧ ದಿನದ ರಜೆಯನ್ನು ಆಚರಿಸುತ್ತದೆ. ಆದಾಗ್ಯೂ, ಎಲ್ಲಾ ನಿರ್ಣಾಯಕ ಕ್ಲಿನಿಕಲ್ ಸೇವೆ ವಿಭಾಗಗಳು ಕಾರ್ಯ ನಿರ್ವಹಿಸುತ್ತವೆ. ಅಂತೆಯೇ ಮತ್ತೊಂದು ಕೇಂದ್ರ ಸರ್ಕಾರಿ ಆಸ್ಪತ್ರೆಯಾಗಿರುವ ಸಫ್ದರ್ಜಂಗ್, ಮಧ್ಯಾಹ್ನ ೨ ಗಂಟೆಯವರೆಗೆ ಮುಚ್ಚಿರುತ್ತದೆ, ಆದರೆ ಹೊರರೋಗಿ ವಿಭಾಗವು ವೆಗಳು ಬೆಳಿಗ್ಗೆ ೮: ರಿಂದ ೧೦ ಗಂಟೆಯವರೆಗೆ ತೆರೆದಿರುತ್ತದೆ. ಮತ್ತು ಲ್ಯಾಬ್ ಸೇವೆಗಳು ೧೧:೩೦ ರವರೆಗೆ ಲಭ್ಯವಿರುತ್ತವೆ. ಏತನ್ಮಧ್ಯೆ, ಅಯೋಧ್ಯೆಯಲ್ಲಿ ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾ ಸಮಾರಂಭದ ಹಿನ್ನೆಲೆ ದೆಹಲಿ ಸರ್ಕಾರದ ಕಚೇರಿಗಳು ಸೋಮವಾರ ಅರ್ಧ ದಿನ ಮುಚ್ಚಲ್ಪಡುತ್ತವೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅಯೋಧ್ಯೆಯಲ್ಲಿ ರಾಮ್ ಲಾಲಾ ಪ್ರಾಣ್ ಪ್ರತಿಷ್ಠಾ ಅಂಗವಾಗಿ ಇದೇ ೨೨ ರಂದು ಎಲ್ಲಾ ದೆಹಲಿ ಸರ್ಕಾರಿ ಕಚೇರಿಗಳು, ನಗರ ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು, ಉದ್ಯಮಗಳು ಮತ್ತು ಮಂಡಳಿಗಳು ಅರ್ಧ ದಿನದ ಮುಚ್ಚುವುದಕ್ಕೆ ಅನುಮೋದಿಸಿದ್ದಾರೆ ಎಂದು ಲೆಫ್ಟಿನೆಂಟ್ ಗೌವರ್ನರ್ ಕಚೇರಿ ತಿಳಿಸಿದೆ.
<><*<><>*><>
ಹಿಂದೂಸ್ತಾನ್ ಸಮಾಚಾರ್
