ದೆಹಲಿ, 31 ಡಿಸೆಂಬರ್(ಹಿ.ಸ):
ಆ್ಯಂಕರ್ :ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್ನ ಸಂಚಿಕೆ ಇಂದು ೧೧ ಗಂಟೆಗೆ ಪ್ರಸಾರವಾಗಲಿದೆ. ಹಲವು ಪ್ರಚಲಿತ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಚಿಂತನೆಗಳನ್ನು ಪ್ರಧಾನಿ ಮೋದಿ, ದೇಶದ ಜನತೆಯೊಂದಿಗೆ ವಿನಿಮಯ ಮಾಡಿಕೊಳ್ಳಲಿದ್ದಾರೆ. ಇದು ಮನ್ ಕಿ ಬಾತ್ ಸರಣಿಯ ೧೦೮ನೇ ಆವೃತ್ತಿಯಾಗಿದೆ. ಪ್ರಧಾನಮಂತ್ರಿ ಅವರು ತಮ್ಮ ಚಿಂತನೆಗಳೊಂದಿಗೆ ಸಾರ್ವಜನಿಕರ ಅನಿಸಿಕೆ, ಅಭಿಪ್ರಾಯಗಳನ್ನು ಸಹ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸುತ್ತಾರೆ. ಆಕಾಶವಾಣಿ ಸುದ್ದಿ ಹಾಗೂ ದೂರದರ್ಶನದ ಎಲ್ಲ ಜಾಲತಾಣಗಳಲ್ಲಿ ’ಮನ್ ಕಿ ಬಾತ್’ ಪ್ರಸಾರವಾಗಲಿದೆ. ಇದಲ್ಲದೆ ಪ್ರಧಾನಮಂತ್ರಿಯವರ ಕಚೇರಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ದೂರದರ್ಶನ ಸುದ್ದಿಯ ಯುಟ್ಯೂಬ್ ಚಾನಲ್ಗಳಲ್ಲೂ ಈ ಕಾರ್ಯಕ್ರಮ ಲಭ್ಯವಾಗಲಿದೆ.
ಹಿಂದೂಸ್ತಾನ್ ಸಮಾಚಾರ್
