ಮುಂಬೈ, 31 ಡಿಸೆಂಬರ್(ಹಿ.ಸ):
ಆ್ಯಂಕರ್ :
ಮಹಿಳಾ ಏಕದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ೩ ರನ್ಗಳ ರೋಚಕ ಗೆಲುವು ಗಳಿಸಿದೆ. ಸರಣಿ ವಿಜಯ ದಾಖಲಿಸಿದೆ. ನಿನ್ನೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ೨೫೯ ರನ್ಗಳ ಗುರಿ ಬೆನ್ನತ್ತಿದ ಭಾರತ, ೫೦ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೫೫ ರನ್ ಗಳಿಸಿತು. ಆಸ್ಟ್ರೇಲಿಯಾದ ಅನ್ನಬೆಲ್ ಸುತರ್ಲ್ಯಾಂಡ್ ೩ ವಿಕೆಟ್ ಗಳಿಸಿದರು. ಭಾರತದ ಪರವಾಗಿ ರಿಚಾ ಘೋಷ್ ಅತ್ಯಧಿಕ ೯೬ ರನ್ ಗಳಿಸಿದರು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ ೫೦ ಓವರ್ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೫೮ ರನ್ ಮಾಡಿತು. ಆಸ್ಟ್ರೇಲಿಯಾದ ಫೋಬೆ ಲಿಚ್ಫೀಲ್ಡ್ ೬೩ ರನ್ ಹಾಗೂ ಎಲ್ಲಿಸೆ ಪೆರಿ ಅರ್ಧ ಶತಕ ಬಾರಿಸಿದರು.ಭಾರತದ ಪರ ದೀಪ್ತಿ ಶರ್ಮಾ ೫ ವಿಕೆಟ್ ಪಡೆದರು. ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ೬ ವಿಕೆಟ್ಗಳ ಜಯ ಗಳಿಸಿದೆ. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ನಾಡಿದ್ದು ಮಂಗಳವಾರ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
