

ರಾಯಚೂರು,, 6 ಡಿಸೆಂಬರ್(ಹಿ.ಸ):
ಆ್ಯಂಕರ್: ಸಮಾಜದಲ್ಲಿ ಹೆಣ್ಣು ಗಂಡಿನ ತಾರತಮ್ಯ ಹೋಗಲಾಡಿಸಿದಾಗ ಮಾತ್ರ ಲಿಂಗತ್ವ ದೌರ್ಜನ್ಯ ತಡೆಗಟ್ಟಬಹುದು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸ್ಸಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮಾನವಿ ತಾಲೂಕಿನ ಜಾನೇಕಲ್ ಗ್ರಾಮದಲ್ಲಿ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ತ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ -ಕೆ.ಎಸ್.ಆರ್.ಎಲ್.ಪಿ.ಎಸ್, ಜಿಲ್ಲಾ ಪಂಚಾಯತಿ ರಾಯಚೂರು, ತಾಲೂಕು ಪಂಚಾಯತಿ ಮಾನವಿ, ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕ, ಸಿರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ಉμÁ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ ಜಾನೇಕಲ್, ಇವರುಗಳ ಸಂಯುಕ್ತಾಶ್ರಯದಲ್ಲಿ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಹೆಣ್ಣು ಮತ್ತು ಗಂಡು ಸಮಾನತೆ ಬರಬೇಕು. ಅದಕ್ಕೆ ಮಕ್ಕಳಿಗೆ ಚಿಕ್ಕವರಿರುವಾಗಲೇ ಸರಿಯಾದ ಸಂಸ್ಕಾರ ಕೊಟ್ಟರೇ ಉತ್ತಮ ಸಮಾಜ ರಚನೆಯಾಗಲು ಸಾಧ್ಯ. ಆ ಮೂಲಕ ಲಿಂಗತ್ವ ದೌರ್ಜನ್ಯ ತಡೆಗಟ್ಟಬಹುದು. ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕರಾಗಿ ಸಬಲರಾಗಬೇಕು, ಒಬ್ಬರಿಗೊಬ್ಬರು ಸಹಾಯಕ್ಕೆ ನಿಲ್ಲಬೇಕು. ಎಲ್ಲಾ ರೀತಿಯ ದೌರ್ಜನ್ಯವನ್ನು ತಡೆದು, ದೌರ್ಜನ್ಯ ಮುಕ್ತ ಜಿಲ್ಲೆಯನ್ನಾಗಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಪೆÇೀಲೀಸ್ ಸಿಬ್ಬಂದಿ ರವಿ.ಪಿ ಅವರು ಮಾತನಾಡಿ ನಿಸರ್ಗದಲ್ಲಿ ಮಾನವರನ್ನು ಸಮಾನವಾಗಿಯೇ ಸೃಷ್ಟಿಸಲಾಗಿದೆ. ಆದರೆ, ಮಾನವ ಸಮಾಜದಲ್ಲಿ ಮಾನವರೆಲ್ಲರೂ ಸಮಾನರಾಗಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಅಸಮಾನತೆ ಕಂಡು ಬರುತ್ತದೆ ಎಂದರು.
ಬ್ಲಾಕ್ ಮ್ಯಾನೇಜರ್ ರಮೇಶ ಮಾತನಾಡಿ ಮಹಿಳೆಯರು ದೌರ್ಜನ್ಯದ ವಿರುದ್ಧ, ಬಾಲ್ಯವಿವಾಹದ ವಿರುದ್ಧ, ಅಪೌಷ್ಟೀಕತೆ, ಲಿಂಗ ತಾರತಮ್ಯವನ್ನು ಧ್ವನಿವೆತ್ತುವುದರ ಮೂಲಕ ತಡೆಗಟ್ಟಬೇಕು. ಮಹಿಳೆಯರಿಗೆ ಸಮಾನವೇತನ ನೀಡುವುದರ ಮೂಲಕ ಲಿಂಗತ್ವ ಸಮಾನತೆಯನ್ನು ಹಣಕಾಸಿನ ವ್ಯವಹಾರದಲ್ಲಿಯೂ ಕೂಡ ಪಾಲಿಸಬೇಕೆಂದು ತಿಳಿಸಿದರು.
ವಲಯ ಮೇಲ್ವಿಚಾರಕರಾದ ಸೂರತ್ ಪ್ರಸಾದ್ ಗಟ್ಟು ಅವರು ಮಾತನಾಡಿ ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲು ಮತ್ತು ಮಹಿಳಾ ಸಮಸ್ಯೆಗಳನ್ನು ಬಗೆಹರಿಸಲು ವಿವಿಧ ಲಿಂಗತ್ವ ವೇದಿಕೆಗಳನ್ನು ಯೋಜನೆಯಡಿಯಲ್ಲಿ ರಚಿಸಬೇಕಾಗಿದೆ. ಸ್ವ- ಸಹಾಯ ಸಂಘಗಳಲ್ಲಿ ಲಿಂಗತ್ವ ಪ್ರಮುಖ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ವಲಯ ಮೇಲ್ವಿಚಾರಕ ಶರಣು ಬಸವ ಅವರು ಮಾತನಾಡಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳಲ್ಲಿ ಲಿಂಗತ್ವ ವೇದಿಕೆಗಳನ್ನು ರಚನೆ ಮಾಡುವುದು, ತಾಲ್ಲೂಕು ಮಟ್ಟದ ಒಕ್ಕೂಟಗಳಲ್ಲಿ ಸಾಮಾಜಿಕ ಕ್ರಿಯಾ ಸಮಿತಿಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ಲಿಂಗತ್ವ ವೇದಿಕೆಗಳನ್ನು ರಚಿಸುವುದು ಹಾಗೂ ಮಹಿಳಾ ಸಮಸ್ಯೆಗಳನ್ನು ಬಗೆಹರಿಸುವುದು ಯೋಜನೆಯ ಗುರಿಯಾಗಿರುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಸ್ವಚ್ಛತಾ ಸಖಿಯರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಅಮರಮ್ಮ, ಕಾರ್ಯದರ್ಶಿ ಜೈತುನಾ ಬಿ, ಮುಖ್ಯ ಪುಸ್ತಕ ಬರಹಗಾರ ಶ್ರೀದೇವಿ, ಎಲ್.ಸಿ.ಆರ್.ಪಿ ಸಂಗೀತಾ, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸ್ವ ಸಹಾಯ ಗುಂಪಿನ ಮಹಿಳೆಯರು ಭಾಗವಹಿಸಿದ್ದರು.
