ಬೆಂಗಳೂರು,10ನವೆಂಬರ್ (ಹಿ.ಸ):
ಆ್ಯಂಕರ್ :
: ಚುನಾವಣಾ ರಾಜಕಾರಣಕ್ಕೆ ನಿವೃತ್ತಿಗೆ ಯಾರ ಒತ್ತಡವೂ ಇಲ್ಲ. ನಾನು ಮತ್ತು ಬಿಎಸ್ ಯಡಿಯೂರಪ್ಪ ಅವರು ಹೆಚ್ಚು ಅವಕಾಶ ಪಡೆದಿದ್ದೇವೆ. ಪಕ್ಷಕ್ಕೆ ನಮ್ಮ ಅನುಭವ ಧಾರೆ ಎರೆಯಲು ನಿಶ್ಚಯ ಮಾಡಿದ್ದೇವೆ. ಇಚ್ಛಾಶಕ್ತಿ ಇದ್ದರೆ ಯಾರು ಏನೂ ತೊಂದರೆ ಮಾಡಲು ಆಗಲ್ಲ. 2019ರಲ್ಲೇ ರಾಜಕೀಯ ನಿವೃತ್ತಿ ಮನಸ್ಸಿನಲ್ಲಿ ಇಟ್ಟುಕೊಂಡಿದ್ದೆ. ಸಾಯುವವರೆಗೆ ನಾನೇ ಇರಬೇಕು ಎನ್ನುವಂತಾಗಬಾರದು. ಬಿಜೆಪಿಗೆ ಹಿರಿತನದ ಕೊರತೆ ಕಾಡುತ್ತದೆ ಎಂದು ಅನ್ನಿಸುವುದಿಲ್ಲ. ಚುನಾವಣಾ ರಾಜಕೀಯ ನಿವೃತ್ತಿ ನನ್ನ ಸ್ವಂತ ನಿರ್ಧಾರ ಸಂಸದ ಡಿ.ವಿ.ಸದಾನಂದಗೌಡ ಹೇಳಿದರು.
ಹಿಂದೂಸ್ತಾನ್ ಸಮಾಚಾರ್
