
ನವದೆಹಲಿ, 27ಅಕ್ಟೋಬರ್ (ಹಿ.ಸ):
ಆ್ಯಂಕರ್ :
ವಿಮಾನಯಾನ ಸಂಸ್ಥೆಗಳು ಅನುಸರಿಸುವ ನ್ಯಾಯ ಸಮ್ಮತವಲ್ಲದ ವಾಣಿಜ್ಯ ವಿಧಾನಗಳಿಗೆ ಸಂಬಂಧಿಸಿದ ವಿಷಯಗಳು ಕುರಿತು ಚರ್ಚಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮುಂದಿನ ತಿಂಗಳ ೮ ರಂದು ವಿಮಾನಯಾನ ಸಂಸ್ಥೆಗಳು, ಪ್ರವಾಸಿ ಪೋರ್ಟಲ್ಗಳು ಮತ್ತು ಗ್ರಾಹಕ ಹಕ್ಕುಗಳ ಬಗ್ಗೆ ಕೆಲಸ ಮಾಡುತ್ತಿರುವ ಎನ್ ಜಿ ಒಗಳ ಸಭೆಯನ್ನು ಕರೆದಿದೆ. ದೃಢಪಟ್ಟ ಟಿಕೆಟ್ಗಳನ್ನು ಹೊಂದಿದ್ದರೂ ವಿಮಾನ ಹತ್ತಲು ನಿರಾಕರಿಸುವುದು, ಕೆಲವೊಂದು ಪ್ರಕರಣಗಳಲ್ಲಿ ಟಿಕೆಟ್ ದರ ಮರು ಪಾವತಿಸುವುದು ಮುಂತಾದ ವಿಷಯಗಳ ಬಗ್ಗೆ ಪರಿಹಾರೋಪಾಯ ಕಂಡುಕೊಳ್ಳಲು ಸಭೆಯಲ್ಲಿ ಚರ್ಚಿಸಲಾಗುವುದು.
ಹಿಂದೂಸ್ತಾನ್ ಸಮಾಚಾರ್
