
ನವದೆಹಲಿ, 27ಅಕ್ಟೋಬರ್ (ಹಿ.ಸ):
ಆ್ಯಂಕರ್ :’ನನ್ನ ದೇಶ ನನ್ನ ಮಣ್ಣು’ ಅಭಿಯಾನದಡಿ ದೇಶಾದ್ಯಂತ ಸಂಗ್ರಹಿಸಿರುವ ಮಣ್ಣನ್ನು ಹೊತ್ತ ನಿಯೋಗಗಳು, ಎಲ್ಲಾ ರಾಜ್ಯಗಳಿಂದ ವಿಶೇಷ ಅಮೃತ ಕಳಶ ರೈಲುಗಳಲ್ಲಿ ದೆಹಲಿಗೆ ಇಂದಿನಿಂದ ಆಗಮಿಸಲಿವೆ.
ಬೆಂಗಳೂರಿನಿಂದ ಇಂದು ಮಧ್ಯಾಹ್ನ ೨ ಗಂಟೆಗೆ ಹೊರಡುವ ರೈಲಿನಲ್ಲಿ ೧ ಸಾವಿರದ ೯ ಮಂದಿ ಕರ್ನಾಟಕದ ಮಣ್ಣನ್ನು ಹೊತ್ತ ಕಳಶಗಳೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಹುತಾತ್ಮ ವೀರ ಯೋಧರಿಗೆ ಗೌರವನಮನವನ್ನು ಸಲ್ಲಿಸುವ ಸಲುವಾಗಿ ಕಳೆದ ಆಗಸ್ಟ್ ೯ ರಂದು ದೇಶಾದ್ಯಂತ ’ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ದೇಶದ ಮೂಲೆ ಮೂಲೆಗಳಿಂದ ಅಮೃತ ಕಳಶ ಯಾತ್ರೆ ಮೂಲಕ ಮಣ್ಣನ್ನು ಸಂಗ್ರಹಿಸಲಾಗಿದ್ದು, ಆ ಅಭಿಯಾನ ಇದೇ ೩೦ರಂದು ಸಮಾಪನಗೊಳ್ಳಲಿದೆ. ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ನಿರ್ಮಿಸುತ್ತಿರುವ ಅಮೃತ ವಾಟಿಕ ಉದ್ಯಾನದ ಗಿಡಗಳಿಗೆ ಹಾಕಲು ಈ ಮಣ್ಣನ್ನು ಬಳಸಲಾಗುವುದು. ಅಮೃತ ವಾಟಿಕ ಉದ್ಯಾನ, ’ಏಕ ಭಾರತ್ ಶ್ರೇಷ್ಠ ಭಾರತ್’ನ ಭವ್ಯ ಸಂಕೇತವಾಗಿದೆ.
ಹಿಂದೂಸ್ತಾನ್ ಸಮಾಚಾರ್
