ನ್ಯೂಲ್ಯಾಂಡ್ಸ್, 2 ಜನವರಿ(ಹಿ.ಸ):
ಆ್ಯಂಕರ್ :
ಜನವರಿ 3 ರಿಂದ ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ಆತಿಥೇಯ ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಭಾರತ ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಕಾರಣ ದ್ವಿತೀಯ ಟೆಸ್ಟ್ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಆದರೆ, ಹಿಂದಿನ ಸೆಂಚುರಿಯನ್ ಪಿಚ್ನಂತೆ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ ಕೂಡ ಟೀಮ್ ಇಂಡಿಯಾಕ್ಕೆ ಮಾರಕವಾಗಲಿದೆ.
ಸೆಂಚುರಿಯನ್ ಪಿಚ್ ನಂತೆಯೇ ಕೇಪ್ ಟೌನ್ ವಿಕೆಟ್ ಕೂಡ ವೇಗಿಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ನ್ಯೂಲ್ಯಾಂಡ್ಸ್ ಕ್ರಿಕೆಟ್ ಗ್ರೌಂಡ್ನಲ್ಲಿರುವ ಪಿಚ್ನಲ್ಲಿ ಹೆಚ್ಚು ಹುಲ್ಲು ಇರುತ್ತದೆ, ಇದು ವೇಗದ ಬೌಲರ್ಗಳಿಗೆ ಸ್ವಿಂಗ್ ಮತ್ತು ಬೌನ್ಸ್ ನೀಡುತ್ತದೆ. ಆದರೆ ಕೊನೆಯ ಎರಡು ದಿನಗಳ ಪಂದ್ಯದಲ್ಲಿ ಸ್ಪಿನ್ನರ್ಗಳಿಗೆ ಬೆಂಬಲ ಸಿಗಲಿದೆ.ಈ ಪಿಚ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಸರಿಯಾದ ನಿರ್ಧಾರ. ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ಇದುವರೆಗೆ 59 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳು ನಡೆದಿವೆ. ಇಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ಭಾರತದ್ದೇ ಆಗಿದೆ. ಇದರಲ್ಲಿ ಭಾರತ ಸೋಲು ಅನುಭವಿಸಿದೆ.ಭಾರತ ಕ್ರಿಕೆಟ್ ತಂಡ ಈ ಮೈದಾನದಲ್ಲಿ ಒಟ್ಟು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈವರೆಗೆ ಒಂದೇ ಒಂದು ಗೆಲುವು ಸಾಧಿಸಿಲ್ಲ. ಆತಿಥೇಯರು ಈ ಮೈದಾನದಲ್ಲಿ ಭಾರತವನ್ನು 4 ಬಾರಿ ಸೋಲಿಸುವಲ್ಲಿ ಯಶಸ್ವಿಯಾಗಿದ್ದರೆ, 2 ಟೆಸ್ಟ್ಗಳು ಡ್ರಾದಲ್ಲಿ ಕೊನೆಗೊಂಡಿವೆ. ಇದೀಗ ಸರಣಿ ಸೋಲು ತಪ್ಪಿಸಲು ಭಾರತ ಈ ಬಾರಿ ಇತಿಹಾಸ ಸೃಷ್ಟಿಸಬೇಕಿದೆ.
ಹಿಂದೂಸ್ತಾನ್ ಸಮಾಚಾರ್
