ಬೆಂಗಳೂರು, 2 ಡಿಸೆಂಬರ್(ಹಿ.ಸ):
ಆ್ಯಂಕರ್ :
ಪ್ರೊ ಕಬಡ್ಡಿ ಲೀಗ್ 2023 ಇಂದು ಅಂದರೆ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. 10ನೇ ಆವೃತ್ತಿಯ ಮೊದಲ ದಿನ ಎರಡು ತಂಡಗಳ ನಡುವೆ ಹಣಾಹಣಿ ನಡೆಯಲಿದೆ. ಇಂದಿನ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ಮುಖಾಮುಖಿಯಾಗುತ್ತಿವೆ. ಹಾಗೆಯೇ ಎರಡನೇ ಪಂದ್ಯ ಯು ಮುಂಬಾ ಮತ್ತು ಯುಪಿ ಯೋಧಾ ನಡುವೆ ನಡೆಯಲಿದೆ. ಪ್ರೊ ಕಬಡ್ಡಿ ಲೀಗ್ 2023ರಲ್ಲಿ ಒಟ್ಟು 132 ಪಂದ್ಯಗಳು ನಡೆಯಲಿದ್ದು, ಲೀಗ್ನ 10 ನೇ ಸೀಸನ್ ಇಂದಿನಿಂದ ಅಂದರೆ ಡಿಸೆಂಬರ್ 2 ರಿಂದ ಆರಂಭವಾಗಿ 21 ಫೆಬ್ರವರಿ 2024 ರವರೆಗೆ ನಡೆಯಲಿದೆ. ಈ ಲೀಗ್ ತನ್ನ ಹಳೆಯ ಸ್ವರೂಪಕ್ಕೆ ಮರಳಿದ್ದು, ಅಂದರೆ ಈಗ 12 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಇನ್ನು ಈ ಬಾರಿಯ ಪ್ರೊ ಕಬಡ್ಡಿ ಲೀಗ್ನ ಲೈವ್ ಸ್ಟ್ರೀಮಿಂಗ್ ಅನ್ನು ಉಚಿತವಾಗಿ ಯಾವಾಗ, ಎಲ್ಲಿ ಮತ್ತು ಹೇಗೆ ವೀಕ್ಷಿಸಬಹುದು ಎಂಬುದನ್ನು ನೋಡುವುದಾದರೆ..
ಮೊದಲ ದಿನದ ಪೂರ್ಣ ವಿವರ ಇಂತಿದೆ
ಪ್ರೊ ಕಬಡ್ಡಿ ಲೀಗ್ನ ಮೊದಲ ದಿನದಂದು ಎಷ್ಟು ಪಂದ್ಯಗಳನ್ನು ಆಡಲಾಗುತ್ತದೆ?
ಪ್ರೊ ಕಬಡ್ಡಿ ಲೀಗ್ 2023 ರ ಮೊದಲ ದಿನ ಅಂದರೆ ಡಿಸೆಂಬರ್ 2 ರಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್ ನಡುವೆ ಮತ್ತು ಎರಡನೇ ಪಂದ್ಯ ಯು ಮುಂಬಾ ಮತ್ತು ಯುಪಿ ಯೋಧಾ ನಡುವೆ ನಡೆಯಲಿದೆ.
ಮೊದಲ ದಿನದ ಪಂದ್ಯಗಳು ಎಷ್ಟು ಗಂಟೆಗೆ ಆರಂಭವಾಗಲಿವೆ?
ಪ್ರೊ ಕಬಡ್ಡಿ ಲೀಗ್ನ ಮೊದಲ ಪಂದ್ಯ ರಾತ್ರಿ 8 ಗಂಟೆಗೆ ಆರಂಭವಾದರೆ, ಎರಡನೇ ಪಂದ್ಯ ರಾತ್ರಿ 9 ಗಂಟೆಗೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್
