ಇಸ್ಲಾಮಾಬಾದ್, 3 ಫೆಬ್ರವರಿ (ಹಿ.ಸ):
ಆ್ಯಂಕರ್ :ಭಾರತ ಮತ್ತು ಆತಿಥೇಯ ಪಾಕಿಸ್ತಾನ ತಂಡಗಳ ಇಸ್ಲಾಮಾಬಾದ್ನಲ್ಲಿ ಇಂದಿನಿಂದ ಡೇವಿಸ್ ಕಪ್ ಟೆನಿಸ್ ವಿಶ್ವ ಗುಂಪು ೧ರ ಪ್ಲೇ ಆಫ್ ಸುತ್ತು ಆರಂಭಿಸಲಿದೆ.
ಡೇವಿಸ್ ಕಪ್ ಇತಿಹಾಸದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಿದ ಎಲ್ಲಾ ಏಳು ಪಂದ್ಯಗಳಲ್ಲೂ ಜಯಗಳಿಸಿದ್ದು, ಈ ಬಾರಿಯೂ ಅದೇ ಫಲಿತಾಂಶ ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ.
ಸುಮಾರು ೬೦ ವರ್ಷಗಳ ನಂತರ ಭಾರತ ಟೆನಿಸ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಇಂದು ಎರಡು ಸಿಂಗಲ್ಸ್ ಪಂದ್ಯಗಳು ನಡೆಯಲಿವೆ. ಮೊದಲ ಸಿಂಗಲ್ಸ್ನಲ್ಲಿ ರಾಮಕುಮಾರ್ ರಾಮನಾಥನ್ ಐಸಾಮ್ ಉಲ್ ಹಕ್ ಖುರೇಷಿಯನ್ನು ಎದುರಿಸಲಿದ್ದರೆ, ಎರಡನೇ ಸಿಂಗಲ್ಸ್ನಲ್ಲಿ ಶ್ರೀರಾಮ್ ಬಾಲಾಜಿ ಅಕೀಲ್ ಖಾನ್ ವಿರುದ್ಧ ಸೆಣಸಲಿದ್ದಾರೆ.
ನಾಳೆ ಡಬಲ್ಸ್ ಪಂದ್ಯಗಳು ನಡೆಯಲಿದ್ದು, ಯೂಕಿ ಭಾಂಬ್ರಿ ಮತ್ತು ಸಾಕೇತ್ ಮೈನೇನಿ ಜೋಡಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.
