ಬೆಂಗಳೂರು,
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುಂಬರುವ ಐಪಿಎಲ್ ಗಾಗಿ ತನ್ನ ಲೋಗೋ ವಿನ್ಯಾಸವನ್ನು ಬದಲಿಸಿದೆ. ಈ ಬದಲಾವಣೆಯೊಂದಿಗೆ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿಕೊಂಡಿದೆ.
ವಿಶೇಷ ಎಂದರೆ ಆರ್ ಸಿ ಬಿ ಫ್ರಾಂಚೈಸಿಯು ತನ್ನ ಲೋಗೋವನ್ನು ಬದಲಿಸುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ನಾಲ್ಕು ಬಾರಿ ಹೊಸ ಲೋಗೋದೊಂದಿಗೆ ಕಣಕ್ಕಿಳಿದಿದೆ. ಇದೀಗ ಐದನೇ ಬಾರಿಗೆ ಲೋಗೋ ಬದಲಿಸಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಹಾಗಿದ್ರೆ ಆರ್ಸಿಬಿ ತಂಡದ ಈ ಹಿಂದಿನ ಲೋಗೋ ವಿನ್ಯಾಸಗಳು ಹೇಗಿದ್ದವು ಎಂದು ನೋಡೋಣ….
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಈ ಲೋಗೋ ವಿನ್ಯಾಸದೊಂದಿಗೆ ಕಣಕ್ಕಿಳಿದಿತ್ತು. ಅಂದು ಆರ್ ಸಿ ಬಿ ತನ್ನ ಲೋಗೋ ವಿನ್ಯಾಸದಲ್ಲಿ ಆರ್ ಸಿ (ರಾಯಲ್ ಚಾಲೆಂಜರ್ಸ್) ಯನ್ನು ಎದ್ದು ಕಾಣುವಂತೆ ಚಿತ್ರಿಸಿದ್ದರು. ಅಂದರೆ ಇಲ್ಲಿ ಸಿಂಹದ ಗುರುತಿಕ್ಕಿಂತ ರಾಯಲ್ ಚಾಲೆಂಜರ್ಸ್ ಬರಹಕ್ಕೆ ಪ್ರಾಶಸ್ತ್ಯ ನೀಡಲಾಗಿತ್ತು
ಐಪಿಎಲ್ 2009 ರಲ್ಲಿ ಆರ್ಸಿಬಿ ತಂಡವು ಲೋಗೋ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಿತು. ಮೊದಲ ಸೀಸನ್ನ ಲೋಗೋವನ್ನು ಇಲ್ಲಿ ಮುಂದುವರೆಸಲಾಗಿದ್ದರೂ ಬಣ್ಣಗಳಲ್ಲಿ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಈ ಲೋಗೋದೊಂದಿಗೆ ಆರ್ಸಿಬಿ 7 ಸೀಸನ್ಗಳಲ್ಲಿ ಕಣಕ್ಕಿಳಿದಿರುವುದು ವಿಶೇಷ..
