ಗುವಾಹಟಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಜಸ್ತಾನ್ ರಾಯಲ್ಸ್ ವಿರುದ್ಧ ೫ ವಿಕೆಟ್ಗಳಿಂದ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಜಸ್ತಾನ್ ರಾಯಲ್ಸ್, ರಿಯಾಗ್ ಪರಾಗ್ ೪೮ ಹಾಗೂ ರವಿಚಂದ್ರನ್ ಅಶ್ವಿನ್ ಅವರ ೨೮ ರನ್ ನೆರವಿನಿಂದ ೨೦ ಓವರ್ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೪೪ ರನ್ ಗಳಿಸಿತು. ಪಂಜಾಬ್ ಪರ ಸ್ಯಾಮ್ ಕರ್ರನ್, ರಾಹುಲ್ ಚಾಹರ್, ಹರ್ಷಲ್ ಪಟೇಲ್ ತಲಾ ೨ ವಿಕೆಟ್ ಪಡೆದರು. ಪಂಜಾಬ್ ತಂಡವು ೧೮.೫ ಓವರ್ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೧೪೫ ರನ್ ಗಳಿಸಿ ಗೆಲುವು ಸಾಧಿಸಿತು.
BulletsIn
- ರಾಜಸ್ತಾನ್ ರಾಯಲ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು.
- ರಿಯಾಗ್ ಪರಾಗ್ ೪೮ ರನ್, ರವಿಚಂದ್ರನ್ ಅಶ್ವಿನ್ ೨೮ ರನ್ ಗಳಿಸಿದರು.
- ರಾಜಸ್ತಾನ್ ತಂಡವು ೨೦ ಓವರ್ಗಳಲ್ಲಿ ೯ ವಿಕೆಟ್ ನಷ್ಟಕ್ಕೆ ೧೪೪ ರನ್ ಗಳಿಸಿತು.
- ಪಂಜಾಬ್ ಪರ ಸ್ಯಾಮ್ ಕರ್ರನ್, ರಾಹುಲ್ ಚಾಹರ್, ಹರ್ಷಲ್ ಪಟೇಲ್ ತಲಾ ೨ ವಿಕೆಟ್ ಪಡೆದರು.
- ಪಂಜಾಬ್ ಕಿಂಗ್ಸ್ ೧೮.೫ ಓವರ್ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೧೪೫ ರನ್ ಗಳಿಸಿತು.
- ಪಂಜಾಬ್ ತಂಡದ ನಾಯಕ ಸ್ಯಾಮ್ ಕರ್ರನ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿದರು.
- ಸ್ಯಾಮ್ ಕರ್ರನ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
- ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದೆ.
- ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ.
- ಪಂದ್ಯ ರಾತ್ರಿ ೭:೩೦ ಕ್ಕೆ ಆರಂಭವಾಗಲಿದೆ.
