ವೈಜಾಗ್, 2 ಫೆಬ್ರವರಿ :
ಆ್ಯಂಕರ್ :ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋತ ನಂತರ, ಟೀಮ್ ಇಂಡಿಯಾ ಗೆಲುವಿನ ಮೂಲಕ ಕಮ್ಬ್ಯಾಕ್ ಮಾಡುವುದರ ಮೇಲೆ ಮೇಲೆ ಕಣ್ಣಿಟ್ಟಿದೆ. ಇಂದಿನಿಂದ (ಫೆಬ್ರವರಿ 2) ವೈಜಾಗ್ನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದೆ. ಟೀಮ್ ಇಂಡಿಯಾ ಕೊಹ್ಲಿ, ರಾಹುಲ್, ಜಡೇಜಾರಂಹ ಕೆಲ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಯುವ ಆಟಗಾರರಿಂದ ಕೂಡಿರುವ ಭಾರತ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಮೊದಲ ಟೆಸ್ಟ್ನಲ್ಲಿ ನಿಧಾನಗತಿಯ ಪಿಚ್ನಿಂದಾಗಿ ಭಾರತ ತಂಡ ಸೋಲನ್ನು ಎದುರಿಸಬೇಕಾಯಿತು. ಈ ಹಿಂದೆ ವಿಶ್ವಕಪ್ನಲ್ಲೂ ನಿಧಾನಗತಿಯ ಪಿಚ್ನಿಂದಾಗಿ ಟೀಮ್ ಇಂಡಿಯಾ ಪ್ರಶಸ್ತಿ ಕಳೆದುಕೊಂಡಿದ್ದು ಗೊತ್ತೇ ಇದೆ. ಇದೀಗ ಇಂಡೋ-ಇಂಗ್ಲೆಂಡ್ ಎರಡನೇ ಟೆಸ್ಟ್ಗಾಗಿ ವಿಶಾಖಪಟ್ಟಣಂನ ಪಿಚ್ ಕೂಡ ನಿಗೂಢವಾಗಿದೆ. ಪಂದ್ಯಕ್ಕೂ ಮುನ್ನ ವೈಜಾಗ್ ಪಿಚ್ ಊಹಿಸುವುದು ಕಷ್ಟ. ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಸಾಮಾನ್ಯವಾಗಿ ಇದು ಸ್ಪಾಟ್ ಪಿಚ್ ಆಗಿರಬಹುದು ಎಂದು ನಂಬಲಾಗಿದೆ. ಅದೇನೆ ಇದ್ದರೂ ಪಂದ್ಯ ಆರಂಭವಾಗದ ಬಳಿಕವಷ್ಟೆ ಸ್ಪಷ್ಟ ಚಿತ್ರಣ ಸಿಗಲಿದೆ.
