ಪ್ಯಾರಿಸ್‌ನಲ್ಲಿ ನಡೆದ 33ನೇ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನೆರವೇರಿತು. ವಿಶ್ವದ ಅತ್ಯಂತ ದೊಡ್ಡ ಕ್ರೀಡಾಜಾತ್ರೆಯಾದ ಒಲಿಂಪಿಕ್ಸ್‌ನ ಉದ್ಘಾಟನೆ ಇತಿಹಾಸದಲ್ಲೇ ಮೊದಲು ನೀರಿನ ಮೇಲೆ, ನದಿ ಮೇಲೆ ನಡೆಯುವಂತಹ ವಿಶಿಷ್ಟ ಕಾರ್ಯಕ್ರಮವಾಗಿತ್ತು. ವರುಣನ ಆರ್ಭಟದ ನಡುವೆಯೂ ಫ್ರಾನ್ಸ್ ಯಶಸ್ವಿಯಾಗಿ ಈ ಸಮಾರಂಭವನ್ನು ನಡೆಸಿತು.
BulletsIn
- ಪ್ಯಾರಿಸ್‌ನ ಸಿಟಿ ಆಫ್ ಲವ್‌ನಲ್ಲಿ 33ನೇ ಒಲಿಂಪಿಕ್ಸ್ ಉದ್ಘಾಟನೆ.
- ಕಾರ್ಯಕ್ರಮ ಬಣ್ಣ ಬಣ್ಣದ ಲೈಟ್‌ಗಳಿಂದ ಆಕರ್ಷಕವಾಗಿ ನಡೆಸಿತು.
- ಸ್ಪರ್ಧಿಗಳ ಸಂಭ್ರಮ, ಸಡಗರ, ಸಿಡಿಮದ್ದುಗಳ ಸದ್ದುಗದ್ದಲ.
- ಡ್ಯಾನ್ಸ್, ಖ್ಯಾತ ಗಣ್ಯರ ಅಪೂರ್ವ ಸಮಾಗಮ.
- ಭಾರತದಿಂದ 117 ಆಟಗಾರರು ಪಾಲ್ಗೊಂಡಿದ್ದಾರೆ.
- ಪಿವಿ ಸಿಂಧು ಮತ್ತು ಶರತ್ ಕಮಲ್ ನೇತೃತ್ವದ ಭಾರತೀಯ ತಂಡ ದೋಣಿಯಲ್ಲಿ ಮೆರವಣಿಗೆಯಲ್ಲಿ ಸಾಗಿತು.
- ಸಿಂಧು ಹಾಗೂ ಶರತ್ ಭಾರತದ ಧ್ವಜಧಾರಿಗಳಾಗಿದ್ದರು.
- ಕಾರ್ಯಕ್ರಮದಲ್ಲಿ ಭಾರತೀಯ ಕ್ರೀಡಾಪಟುಗಳ ಉತ್ಸಾಹ ಇಮ್ಮಡಿಗೊಂಡಿತ್ತು.
- ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಈ ಬಾರಿ ಒಲಿಂಪಿಕ್ಸ್ ಉದ್ಘಾಟನೆಯ ವಿಶೇಷತೆ ನೀರಿನ ಮೇಲೆ ನಡೆಯುವದು.
- ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಗೆ ಉದ್ಘಾಟನಾ ಸಮಾರಂಭ ಆರಂಭವಾಯಿತು.
