ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಈಗ ಟಿ20 ವಿಶ್ವಕಪ್ಗಾಗಿ ಸಿದ್ಧತೆಗಳನ್ನು ಆರಂಭಿಸಿದೆ. ಮುಂದಿನ ತಿಂಗಳಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನ ಒಂದು ತಿಂಗಳುಗಳ ಕಾಲ ನಡೆಯಲಿದೆ. ಇದಾದ ಬಳಿಕ ಭಾರತ ತಂಡವು ಹಲವು ಸರಣಿಗಳನ್ನು ಆಡಲಿದೆ. ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ:
BulletsIn
- ಟಿ20 ವಿಶ್ವಕಪ್ 2024: ಜೂನ್ 2 ರಿಂದ ಜೂನ್ 29 ರವರೆಗೆ ನಡೆಯಲಿದೆ. ವೆಸ್ಟ್ ಇಂಡೀಸ್-ಯುಎಸ್ಎ ಆತಿಥ್ಯ.
- ಭಾರತ vs ಝಿಂಬಾಬ್ವೆ: ಟಿ20 ವಿಶ್ವಕಪ್ ಮುಗಿದ ನಂತರ ಜುಲೈ 6 ರಿಂದ ಜುಲೈ 14 ರವರೆಗೆ 5 ಪಂದ್ಯಗಳ ಟಿ20 ಸರಣಿ.
- ಭಾರತ vs ಶ್ರೀಲಂಕಾ: ಜುಲೈ-ಆಗಸ್ಟ್ ತಿಂಗಳಲ್ಲಿ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ. ಶ್ರೀಲಂಕಾ ಆತಿಥ್ಯ.
- ಭಾರತ vs ಬಾಂಗ್ಲಾದೇಶ್: ಸೆಪ್ಟೆಂಬರ್ ತಿಂಗಳಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿ. ಭಾರತದಲ್ಲಿ.
- ಭಾರತ vs ನ್ಯೂಝಿಲೆಂಡ್: ಅಕ್ಟೋಬರ್ನಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ. ಭಾರತ ಆತಿಥ್ಯ.
- ಭಾರತ vs ಆಸ್ಟ್ರೇಲಿಯಾ: ನವೆಂಬರ್-ಡಿಸೆಂಬರ್ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ. 5 ಟೆಸ್ಟ್ ಪಂದ್ಯಗಳು. ಆಸ್ಟ್ರೇಲಿಯಾದಲ್ಲಿ.
- ಭಾರತ vs ಇಂಗ್ಲೆಂಡ್: 2025 ರಲ್ಲಿ ಜನವರಿ-ಫೆಬ್ರವರಿಯಲ್ಲಿ 3 ಏಕದಿನ, 5 ಟಿ20 ಪಂದ್ಯಗಳ ಸರಣಿ. ಭಾರತದಲ್ಲಿ.
- ಚಾಂಪಿಯನ್ಸ್ ಟ್ರೋಫಿ 2025: ಫೆಬ್ರವರಿ-ಮಾರ್ಚ್ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ. 8 ತಂಡಗಳು ಪಾಲ್ಗೊಳ್ಳಲಿವೆ.
- ಐಪಿಎಲ್ 2025: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಸೀಸನ್.
-
ಟೀಮ್ ಇಂಡಿಯಾ ವಿವಿಧ ಟೂರ್ನಿಗಳಿಗೆ ಸಿದ್ಧತೆಗಳು.
