

ಬಳ್ಳಾರಿ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಕ್ರೀಡಾ ಮಂತ್ರಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಸ್ ಹಾಗೂ ರಾಜಸ್ತಾನ್ ಸರ್ಕಾರದ ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ರಾಜಸ್ಥಾನದ ಜೈಪುರದಲ್ಲಿ ನವೆಂಬರ್ 25 ರಿಂದ ಡಿಸೆಂಬರ್ 5 ರವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 3 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಫ್ರೀ ಸ್ಟೆöÊಲ್ ಕುಸ್ತಿಯಲ್ಲಿ ಹೊಸಪೇಟೆ ಶ್ರೀ ಮಾತಾ ಕಾಲೇಜ್‌ನ ಮಂಜುನಾಥ್, ಅಥ್ಲೆಟಿಕ್ಸ್ನಲ್ಲಿ ಲೋಕೇಶ್ ರಾಥೋಡ್ ಡೆಕಾಥ್ಲಾನ್, ಹೂವಿನಹಡಗಲಿ ಜಿಬಿಆರ್ ಕಾಲೇಜ್‌ನ ಸಚಿನ್ ಹ್ಯಾಮರ್ ಥ್ರೋ, ಮೂರು ಜನ ಕ್ರೀಡಾಪಟುಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಶ್ರೇಷ್ಠ ಸ್ಥಾನ ಪಡೆದಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
