ರಾಯಚೂರು, 29 ಡಿಸೆಂಬರ್(ಹಿ.ಸ):
ಆ್ಯಂಕರ್ :
ಲಾಯರ್ಸ್ ಕ್ರಿಕೆಟ್ ವರ್ಲ್ಡ್ ಕಪ್ 2023 ರ ಆಟಕ್ಕೆ ಭಾರತದ ಪ್ರತಿನಿಧಿಯಾಗಿ ವಕೀಲರಾದ ವಿಜಯಕುಮಾರ ಮಟಮಾರಿ ಆಯ್ಕೆ ಆಗಿದ್ದಾರೆ.
ಡಿಸೆಂಬರ್ 28 ರಿಂದ ಜನವರಿ 6 ರವರೆಗೆ ಶ್ರೀಲಂಕಾದಲ್ಲಿ ನಡೆಯಲಿರುವ ಶ್ರೀಲಂಕಾ ಲಾಯರ್ಸ್ ಕ್ರಿಕೆಟ್ ಕ್ಲಬ್ ಮತ್ತು ಲಾಯರ್ಸ್ ಕ್ರಿಕೆಟ್ ಕ್ಲಬ್ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಅಡ್ವಕೇಟ್ಸ್ ಇನ್ ಇಂಡಿಯಾ ಇವರುಗಳ ಸಹಯೋಗದೊಂದಿಗೆ ಆಯೋಜಿಸಿರುವ ಹಾಗೂ ಇ ವಲಯ ಲಾಗೂನದಿಂದ ನಡೆಸಲ್ಪಡುತ್ತಿರುವ ಮತ್ತು ಎವಿಆರ್ ಗ್ರೂಪ್ ಪ್ರಾಯೋಜಕತ್ವದಲ್ಲಿ, ಹತ್ತು ತಂಡಗಳು, ಎಂಟು ಸ್ಥಾನಗಳು, ಮೂವತ್ತೇಳು ಮ್ಯಾಚಗಳನ್ನು ಒಳಗೊಂಡಂತೆ ಭಾರತ ಪಾಕಿಸ್ತಾನ ಶ್ರೀಲಂಕಾ ಇಂಗ್ಲೆಂಡ್, ಬಾಂಗ್ಲಾದೇಶ್ ಇವರಗಳ ಮಧ್ಯೆ ಶ್ರೀಲಂಕಾದಲ್ಲಿ ನಡೆಯಲಿರುವ ಲಾಯರ್ಸ್ ಕ್ರಿಕೆಟ್ ವರ್ಲ್ಡ್ ಕಪ್ 2023 ರ ಆಟದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಸ್ಥೆಯ ಕ್ರೀಡಾ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ ಮಟಮಾರಿ ವಕೀಲರು ಆಯ್ಕೆಗೊಂಡಿದ್ದಾರೆ.
ಇವರು ರಾಯಚೂರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
