ಓರಾನ್, 10 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : 2026ರ ಫಿಫಾ ವಿಶ್ವಕಪ್‌ಗಾಗಿ ನಡೆಯುತ್ತಿರುವ ಆಫ್ರಿಕಾ ಅರ್ಹತಾ ಪಂದ್ಯಾವಳಿಯಲ್ಲಿ ಅಲ್ಜೀರಿಯಾ ಭರ್ಜರಿ ಗೆಲುವು ದಾಖಲಿಸಿದೆ.
ಗುರುವಾರ ಓರಾನ್‌ನ ಮಿಲೌದ್ ಹಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಲ್ಜೀರಿಯಾ ತಂಡವು ಸೊಮಾಲಿಯಾವನ್ನು 3-0 ಅಂತರದಿಂದ ಸೋಲಿಸಿ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ.
ಅಲ್ಜೀರಿಯಾ ಪರ ಮೊಹಮ್ಮದ್ ಅಮೌರಾ ಎರಡು ಅದ್ಭುತ ಗೋಲು ಗಳಿಸಿದರು, ತಂಡದ ನಾಯಕ ರಿಯಾದ್ ಮಹ್ರೆಜ್ ಮತ್ತೊಂದು ಗೋಲು ಸೇರಿಸಿ ತಂಡದ ಗೆಲುವು ಖಚಿತಪಡಿಸಿದರು.
ಈ ಜಯದಿಂದ ‘ಡೆಸರ್ಟ್ ಫಾಕ್ಸಸ್’ ಎಂದು ಕರೆಯಲ್ಪಡುವ ಅಲ್ಜೀರಿಯಾ ತಂಡವು ಒಂಬತ್ತು ಪಂದ್ಯಗಳಿಂದ 22 ಅಂಕಗಳೊಂದಿಗೆ ಗ್ರೂಪ್ ಜಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಬಲಪಡಿಸಿದೆ.
ಇದುವರೆಗೆ ಅಲ್ಜೀರಿಯಾ ಏಳು ಗೆಲುವು, ಒಂದು ಡ್ರಾ ಮತ್ತು ಒಂದು ಸೋಲಿನ ಸಾಧನೆ ಮಾಡಿದೆ. ಈ ಮೂಲಕ ಅವರು 1982, 1986, 2010 ಮತ್ತು 2014 ನಂತರ ಐದನೇ ಬಾರಿ ವಿಶ್ವಕಪ್‌ನಲ್ಲಿ ಭಾಗವಹಿಸಲಿದ್ದಾರೆ.
ಮೊರಾಕೊ, ಟುನೀಶಿಯಾ ಮತ್ತು ಈಜಿಪ್ಟ್ ನಂತರ ಅಲ್ಜೀರಿಯಾ 2026ರ ವಿಶ್ವಕಪ್‌ಗೆ ಅರ್ಹತೆ ಪಡೆದ ನಾಲ್ಕನೇ ಆಫ್ರಿಕನ್ ರಾಷ್ಟ್ರವಾಗಿದೆ.
2026ರ ಫಿಫಾ ವಿಶ್ವಕಪ್ ಅಮೆರಿಕಾ, ಮೆಕ್ಸಿಕೊ ಮತ್ತು ಕೆನಡಾ ಇವುಗಳು ಜಂಟಿಯಾಗಿ ಆಯೋಜಿಸಲಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa
