ಬೆಂಗಳೂರು, 7 ಡಿಸೆಂಬರ್(ಹಿ.ಸ):
ಆ್ಯಂಕರ್ :
ಟಿ20 ಕ್ರಿಕೆಟ್ ವಿಶ್ವಕಪ್ಗೆ ದಿನಗಣನೆ ಆರಂಭವಾಗಿರುವಾಗಲೇ ಕ್ರೀಡಾಭಿಮಾನಿಗಳಿಗೆ ಕಬಡ್ಡಿ ರಸದೌತಣವೂ ಸಿಗಲಿದೆ. 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ಗೆ ಚಾಲನೆ ದೊರೆಯಲಿದ್ದು, ಭಾರತ ಸೇರಿ ಹಲವು ದೇಶಗಳ ಯುವ, ಪ್ರತಿಭಾನ್ವಿತ ಹಾಗೂ ಅನುಭವಿ ಕಬಡ್ಡಿ ಪಟುಗಳು ಅಂಕಣಕ್ಕಿಳಿಯಲಿದ್ದಾರೆ.
ನಾಳೆ ಶುಕ್ರವಾರದಿಂದ ಬೆಂಗಳೂರು ಚರಣದ ಪಂದ್ಯಗಳು ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಬುಲ್ಸ್ ತಂಡ ಮೊದಲ ಪಂದ್ಯದಲ್ಲಿ ದಬಾಂಗ್ ದೆಹಲಿ ವಿರುದ್ಧ ಸೆಣಸಲಿದೆ.
2023ನೇ ಆವೃತ್ತಿಯಲ್ಲಿನ ಪಂದ್ಯಾವಳಿಗಳು ನಗರದಲ್ಲಿ ನಡೆಯಲಿದ್ದು, ಈ ಕುರಿತು ಬೆಂಗಳೂರು ಬುಲ್ಸ್ ತಂಡದ ಕೋಚ್ ರಣದೀಪ್ ಸಿಂಗ್ ಶೆರಾವತ್, 10 ಸೀಸನ್ನಿಂದ ನಾನು ಬುಲ್ಸ್ ಕೋಚ್ ಆಗಿ ಜೊತೆಗಿದ್ದೇನೆ. ಹೀಗಾಗಿ ನನ್ನ ಮೇಲೆ ಸಾಕಷ್ಟು ಒತ್ತಡವಿದೆ. ಆದರೆ ಬೆಂಗಳೂರಿನ ಅಭಿಮಾನಿಗಳ ಬೆಂಬಲದಿಂದ ಒತ್ತಡವನ್ನು ಉತ್ತಮ ರೀತಿಯಲ್ಲಿ ನಿಭಾಯಿಸುವ ವಿಶ್ವಾಸವಿದೆ ಎಂದರು.
ತಂಡದಲ್ಲಿ 9 ಜನ ಉತ್ತಮ ಆಟಗಾರರು ಇದ್ದಾರೆ. ಮುಂದಿನ ಪಂದ್ಯಾವಳಿಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಲ್ಲರೂ ಉತ್ತಮ ಆಟ ಪ್ರದರ್ಶಿಸಲಿದ್ದಾರೆ. ಅನುಭವಿ ಆಟಗಾರರು ನಮ್ಮ ತಂಡದಲ್ಲಿದ್ದು ಡಿಫೆಂಡರ್, ರೇಡರ್ ಎಲ್ಲರೂ ಬಲಿಷ್ಠವಾಗಿದ್ದಾರೆ ಎಂದರು.ತಪ್ಪುಗಳನ್ನು ತಿದ್ದಿ ನಡೆಯುತ್ತೇವೆ: ನಾಯಕ ಸೌರಭ್ ಮಾತನಾಡಿ, ಕಳೆದ ಎರಡು ಪಂದ್ಯಗಳಲ್ಲಿ ಕೆಲವೊಂದು ತಪ್ಪುಗಳಾಗಿದೆ. ಮುಂದಿನ ಪಂದ್ಯಗಳಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಆಡುತ್ತೇವೆ. ಎಲ್ಲ ಆಟಗಾರರು ಒಗ್ಗಟ್ಟಿನಿಂದ ಇದ್ದು, ಮುಂದಿನ ಪಂದ್ಯಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದೇವೆ. ನಮ್ಮ ತಂಡ ಕಳೆದ ಎಲ್ಲ ಸೀಸನ್ ಅಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಫೈನಲ್ ಗೆಲುವು ನಮ್ಮದಾಗಿಲ್ಲ, ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲಿದ್ದೇವೆ ಎಂದು ಹೇಳಿದರು.ಸ್ಟಾರ್ ರೇಡರ್ ಭರತ್ ಮಾತನಾಡಿ, ಕಳೆದ ಎರಡು ಪಂದ್ಯಗಳಲ್ಲಿ ಸ್ವಲ್ಪ ತಪ್ಪಾಗಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಮುಂದಿನ ಪಂದ್ಯಗಳಲ್ಲಿ ಗೆಲುವು ದಾಖಲಿಸುವ ವಿಶ್ವಾಸವಿದೆ ಎಂದರು.ತಂಡದ ಮತ್ತೊಬ್ಬ ಸ್ಟಾರ್ ಆಟಗಾರ ವಿಕಾಸ್ ಖಂಡೋಲ ಮಾತನಾಡಿ, ಕಳೆದ ಸೀಸನ್ನಲ್ಲಿ ನಾನು ಉತ್ತಮವಾಗಿ ಆಡಿಲ್ಲ. ನನ್ನ ತಪ್ಪುಗಳು ಏನಿದೆ ಎನ್ನುವುದನ್ನು ಅರಿತು ಸರಿಪಡಿಸಿಕೊಂಡಿದ್ದೇನೆ. ಈ ಬಾರಿ ಇಲ್ಲಿನ ಫ್ಯಾನ್ಸ್ಗಳ ಸಪೋರ್ಟ್ನಿಂದ ಉತ್ತಮವಾಗಿ ಆಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್
