ದೆಹಲಿ, 1 ಜನವರಿ(ಹಿ.ಸ):
ಆ್ಯಂಕರ್ :
ಆಸ್ಟ್ರೇಲಿಯಾದ ಐಕಾನಿಕ್ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ನೊಂದಿಗೆ ಏಕದಿನ ಕ್ರಿಕೆಟ್ಗೂ ನಿವೃತ್ತಿ ಘೋಷಿಸುವುದರೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಅಂತಿಮ ಟೆಸ್ಟ್ ಆಡಲಿರುವ ವಾರ್ನರ್, ಇದೀಗ ನಾನು 50 ಓವರ್ಗಳ ಮಾದರಿಯಿಂದಲೂ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯೆ ಅಗತ್ಯವಿದ್ದರೆ ಚಾಂಪಿಯನ್ಸ್ ಟ್ರೋಫಿಗೆ ಲಭ್ಯವಿರುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
“ನಾನು ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಹೊಂದುತ್ತಿದ್ದೇನೆ. ವಿಶ್ವಕಪ್ ನನ್ನ ಕೊನೆಯ ಪಂದ್ಯವಾಗಿದೆ. ಆ ಗೆಲುವನ್ನು ಸಾಧಿಸಿದ್ದೇನೆ ಮತ್ತು ಭಾರತದಲ್ಲಿ ಅದನ್ನು ಗೆದ್ದುಕೊಂಡಿದ್ದೇನೆ, ಇದು ಒಂದು ದೊಡ್ಡ ಸಾಧನೆ ಎಂದು ನಾನು ಭಾವಿಸುತ್ತೇನೆ,” ಎಂದು ವಾರ್ನರ್ ಸೋಮವಾರ ಹೇಳಿದ್ದಾರೆ. ವಾರ್ನರ್ ಅವರು SCG ಅಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲು ನಿರ್ಧರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
