ರಾಯಚೂರು, 4 ಜನವರಿ(ಹಿ.ಸ):
ಆ್ಯಂಕರ್ : ಸ್ವಚ್ಛ ಭಾರತ್ ಮಿಷನ್ ಯೋಜನೆ (ನಗರ) 2.0 ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ 2023-24ನೇ ಸಾಲಿನ ಪಟ್ಟಣ ಪಂಚಾಯತ ಸಿರವಾರಗೆ ಒಟ್ಟು 58 ವೈಯಕ್ತಿಕ ಶೌಚಾಲಯ ಗುರಿಯನ್ನು ನಿಗದಿಪಡಿಸಿದ್ದು, ಪಟ್ಟಣ ಪಂಚಾಯತ ಸಿರವಾರ ವ್ಯಾಪ್ತಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದದೆ ಇರುವ ಹಾಗೂ ಈ ಹಿಂದೆ ವೈಯಕ್ತಿಕ ಶೌಚಾಲಯಕ್ಕೆ ಪಟ್ಟಣ ಪಂಚಾಯತಿ ಯಿಂದ ಯಾವುದೇ ಅನುದಾನ ಪಡೆಯದೇ ಇರುವ ಫಲಾನುಭವಿಗಳು ತಮ್ಮ ಸ್ವಂತ ಜಾಗದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ಜ.12ರೊಳಗಾಗಿ ಕಛೇರಿಯ ವೇಳೆಯಲ್ಲಿ ಕಾರ್ಯಾಲಯಕ್ಕೆ ಸಲ್ಲಿಸಬಹುದು.
ಅವದಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಕಿರಿಯ ಅಭಿಯಂತರರ ಅಧಿಕಾರಿಗಳನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಸಿರವಾರ ಪಟ್ಟಣ ಪಂಚಾಯತಿಯ ಆಡಳಿತಾಧಿಕಾರಿಗಳು
ತಿಳಿಸಿದ್ದಾರೆ.
