• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಸಂಸದರ ಕಚೇರಿ ಮುಂದೆ ಸಿಐಟಿಯು ಸಂಘಟನೆ ಪ್ರತಿಭಟನೆ
Regional

ಸಂಸದರ ಕಚೇರಿ ಮುಂದೆ ಸಿಐಟಿಯು ಸಂಘಟನೆ ಪ್ರತಿಭಟನೆ

CliQ INDIA
Last updated: January 25, 2024 7:16 am
CliQ INDIA
Share
3 Min Read
SHARE

ಕೋಲಾರ, ೨೪ ಜನವರಿ (ಹಿ.ಸ)

ಆ್ಯಂಕರ್ : ಕಾರ್ಮಿಕರಿಗೆ ಕನಿಷ್ಠ ವೇತನ, ಬೆಲೆ ಏರಿಕೆ, ಕಾರ್ಮಿಕರ ಹಕ್ಕುಗಳಿಗೆ, ಸಂವಿಧಾನದ ಉಳಿಗಾಗಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳ ವಾಪಸ್ಸಾತಿಗೆ ಆಗ್ರಹಿಸಿ ನಗರದಲ್ಲಿರುವ ಸಂಸದ ಎಸ್.ಮುನಿಸ್ವಾಮಿ ಕಚೇರಿ ಮುಂದೆ ಬುಧವಾರ ಸಿಐಟಿಯು ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಿದರು.

ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಕಳೆದ ೧೦ ವರ್ಷಗಳಿಂದ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟದಲ್ಲಿದ್ದು, ಬದುಕು ಸಾಗಿಸಲು ಹರಸಾಹಸಪಡುವಂತಾಗಿದೆ. ದೇಶವನ್ನಾಳುವ ನರೇಂದ್ರ ಮೋದಿ ಸರಕಾರ ನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು, ಜನಪರ ಪರ್ಯಾಯ ನೀತಿಗಳನ್ನು ಜಾರಿಗೊಳಿಸಬೇಕು ಹಾಗೂ ದುಡಿಯುವ ವರ್ಗದ ಹಕ್ಕನ್ನು ಸಂರಕ್ಷಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ದೇಶ ಉಳಿಸಿ, ಜನತೆಯ ಬದುಕನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ದೇಶಾದ್ಯಂತ ವ್ಯಾಪಕ ಪ್ರಚಾರಾಂದೋಲನ ನಡೆಸಿದ್ದಾರೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವು ಕೇವಲ ಬಂಡವಾಳಶಾಹಿಗಳ ಪರವಾದ ಯೋಜನೆಗಳನ್ನು ಜಾರಿಬಮಾಡುವ ಮೂಲಕ ಕಾರ್ಪೊರೇಟ್ ಸಂಸ್ಥೆಗಳ ಕೈಗೊಂಬೆಯಾಗಿದೆ ಅಷ್ಟೇ ಅಲ್ಲದೇ ಅಯೋಧ್ಯೆ ರಾಮನ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ರಾಮಂದಿರ ಸ್ಥಾಪನೆ ಮಾಡಿದರೆ ಸಾಲದು ಬಡವರ ದಲಿತರ ಕಾರ್ಮಿಕರ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ಜಾರಿ ಮಾಡಬೇಕು ಕೋಲಾರದಲ್ಲಿ ಐದು ವರ್ಷಗಳ ಕಾಲ ಅಧಿಕಾರ ಅನುಭವಿಸಿರುವ ಸಂಸದ ಮುನಿಸ್ವಾಮಿ ಅವರ ಸಾಧನೆ ಶೂನ್ಯ ಕೇವಲ ಮತಗಳಿಗಾಗಿ ಅಧಿಕಾರಕ್ಕಾಗಿ ಕೋಮುವಾದವನ್ನು ಸೃಷ್ಟಿಸಿ ಭಯದ ವಾತಾವರಣ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ ಕೇಂದ್ರದ ನರೇಂದ್ರ ಮೋದಿ ಸರಕಾರವು ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟವಾಗಿದೆ. ತನ್ನ ಜನವಿರೋಧಿ ನೀತಿಗಳಿಂದ ದುಡಿಯುವ ವರ್ಗ ಹಾಗೂ ಜನಸಾಮಾನ್ಯರ ಬದುಕನ್ನು ನಾಶಗೊಳಿಸಿದೆ ದೇಶದ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಲು ಹೊರಟಿದ್ದು, ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸುವ ಷಡ್ಯಂತ್ರ ಅಡಗಿದೆ. ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅತ್ಯಂತ ನಿಕೃಷ್ಟವಾಗಿ ಬದುಕುವಂತಾಗಿದೆ ಎಂದು ಆರೋಪಿಸಿದರು.

ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಬಿ ಕೃಷ್ಣಪ್ಪ ಮಾತನಾಡಿ ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ದೇಶದ ಅಭಿವೃದ್ಧಿಯ ಸಂಕೇತಗಳಾದ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸೌಲಭ್ಯಗಳಲ್ಲಿ ಕಳೆದ ಬಜೆಟ್ ನಲ್ಲಿ ೮೫೪೨ ಕೋಟಿ ರೂಗಳನ್ನು ಕಡಿತ ಮಾಡುವ ಮುಖಾಂತರ ಕತ್ತರಿ ಹಾಕುತ್ತಿದೆ, ಇದರಿಂದ ದೇಶದ ವಿವಿಧ ಯೋಜನೆಯಲ್ಲಿ ಸುಮಾರು ೧೨ ಕೋಟಿ ಫಲಾನುಭವಿಗಳು ಸರಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಬಾರಿಯು ಸಂಸತ್ತಿನಲ್ಲಿ ಸುಮಾರು೧೪೬ ಸದಸ್ಯರನ್ನು ಹೊರಗೆ ಹಾಕಿ ಲೋಕಭೆಯಲ್ಲಿ ೧೮, ರಾಜ್ಯಸಭೆಯಲ್ಲಿ ೧೭ ಬಿಲ್ ಗಳನ್ನು ಮಂಡಿಸಿ ಅಂಗೀಕರಿಸಿದೆ. ಇದು ಪ್ರಜಾತಂತ್ರಕ್ಕೆ ಎಸಗಿದ ದ್ರೋಹ, ಬಡ ಜನತೆಯ ಯೋಜನೆಗಳಿಗೆ ಹಣ ನೀಡದ ಸರ್ಕಾರ ದೇಶದ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ೧೪.೫ ಲಕ್ಷ ಕೋಟಿ ಸಾಲ ಮನ್ನ ಮಾಡಿದೆ. ರೈತ, ಕಾರ್ಮಿಕರ ಮತ್ತು ಜನತೆಯ ಪ್ರಶ್ನೆಗಳನ್ನು ಪರಿಹರಿಸದೆ ಜನ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷ ಅಮರನಾರಾಯಣಪ್ಪ, ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಮುಖಂಡರಾದ ಎಂ ಭೀಮರಾಜ್, ಆಶಾ, ಕೆ.ಮಂಜುನಾಥ್, ಕೇಶವರಾವ್, ತಿರುಪತಿ, ಎಲ್ಐಸಿ ಜಯರಾಂ, ತಂಗರಾಜ್, ಲಿಯೋ, ಅಶೋಕ್, ಶಿವಾನಂದ್, ನಾಗರಾಜಪ್ಪ, ಕೆ.ವಿ ಮಂಜುನಾಥ್, ನಾರಾಯಣಪ್ಪ, ಸುಶೀಲಾ, ಯಲ್ಲಪ್ಪ, ಮುನಿಸ್ವಾಮಿ, ಪೇರುಮಲಪ್ಪ, ಸುಮತಿ, ಮಂಜುಳಮ್ಮ ಇನ್ನೂ ಮುಂತಾದವರು ಭಾಗವಹಿಸಿದ್ದರು.

ಚಿತ್ರ : ಕೋಲಾರ ಸಂಸದರ ಕಚೇರಿ ಮುಂದೆ ಸಿಐಟಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

You Might Also Like

ವಿಪಕ್ಷ ನಾಯಕನ ಆಯ್ಕೆ, ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ನಾಳೆ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ – Hindusthan Samachar Kannada
ಆರ್​ಟಿಓ ಚೆಕ್​​ ಪೋಸ್ಟ್​ಗಳ ಮೇಲೆ ಲೋಕಾಯುಕ್ತ ದಾಳಿ | BulletsIn
ಸೆಪ್ಟೆಂಬರ್ 24ರಿಂದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮತ್ತೆ ಮಳೆ | BulletsIn
ಸಿಬಿಐ ತನಿಖೆ ಆದೇಶ ವಾಪಸ್ಸು,ಸಂಬಂಧಪಟ್ಟವರು ಮಾತಾಡುತ್ತಾರೆ -ಡಿಕೆ ಶಿವಕುಮಾರ್

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಬಿತ್ತಿಪತ್ರ ಹಿಡಿದು ಕೈ ಮುಷ್ಟಿಎತ್ತಿ ಹಿಡಿದು ಉದ್ಘಾಟನೆ
Next Article ಇಂದಿನಿಂದ ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಶುರು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?