
ನವದೆಹಲಿ,11ನವೆಂಬರ್ (ಹಿ.ಸ):
ಆ್ಯಂಕರ್ :
ದೂರವಾಣಿ ಸಂಪರ್ಕ ಕಡಿತಗೊಳಿಸುವುದಾಗಿ ಬೆದರಿಸುವ ಕರೆಗಳು ಬರುತ್ತಿದ್ದಲ್ಲಿ ಅಂತಹ ಕರೆಗಳನ್ನು ಮಾಡುವ ಯಾರೊಂದಿಗೇ ಆಗಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದೆಂದು ಸರ್ಕಾರ ಜನರಿಗೆ ಸಲಹೆ ನೀಡಿದೆ. ಇಂತಹ ದುರುದ್ದೇಶಪೂರಿತ ಕರೆಗಳ ಕುರಿತಂತೆ ದೂರಸಂಪರ್ಕ ಇಲಾಖೆ ಸಾರ್ವಜನಿಕ ಸಲಹೆಯನ್ನು ಜಾರಿಗೊಳಿಸಿದೆ. ದೂರಸಂಪರ್ಕ ಇಲಾಖೆಯು ಸಂಪರ್ಕ ಕಡಿತಮಾಡುವ ಎಚ್ಚರಿಕೆಗಳನ್ನು ಇಲಾಖೆ ದೂರವಾಣಿ ಕರೆಗಳ ಮೂಲಕ ನೀಡುವುದಿಲ್ಲ ಮತ್ತು ಒಂದು ವೇಳೆ ಅಂತಹ ಕರೆಗಳು ಬಂದಲ್ಲಿ ಸಾರ್ವಜನಿಕರು ಅವುಗಳನ್ನು ಸಂಶಯಾಸ್ಪದ ಕರೆಗಳೆಂದು ಪರಿಗಣಿಸಬೇಕೆಂದು ಸಲಹೆಯಲ್ಲಿ ಹೇಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್
