ಕೋಲಾರ, ೨೦ ಆಗಸ್ಟ್ (ಹಿ.ಸ.) :
ಆ್ಯಂಕರ್ : ಇಂದಿನ ಆದುನಿಕ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರಶ್ನಿಸುವ ,ಅನ್ವೇಷಿಸುವ ಮತ್ತು ಹೊಸದನ್ನು ಕಲಿಯುವ ಕುತೂಹಲವನ್ನು ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಮೂಲಕ ಸಮಾಜದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಂಶೋಧನೆಗಳನ್ನು ಉತ್ತೇಜಿಸಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಜಿ.ಶ್ರೀನಿವಾಸ್ ತಿಳಿಸಿದರು.
ಕೋಲಾರ ನಗರದ ನಚಿಕೇತನ ನಿಲಯದಲ್ಲಿ ಸಮಿತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ ಮತ್ತು ಅನ್ವೇಷಣೆಯ ಮನೋಭಾವವನ್ನು ಉತ್ತೇಜಿಸಲು ಈ ದಿನಾಚರಣೆ ಆಚರಣೆಯಲ್ಲಿದ್ದು, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವವನ್ನು ಸಾರುವ ವುವಿಧ ಕಾರ್ಯಕ್ರಮಗಳ ಮೂಲಕ ವೈಜ್ಞಾನಿಕ ಮನೋವೃತ್ತಿ ಯನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಉಪ ನಿರ್ದೇಶಕರ ಕಛೇರಿಯ ತಾಂತ್ರಿಕ ಅಧಿಕಾರಿಯಾದ ಶರಣಪ್ಬ ಜಮಾದಾರ್ ಮಾತನಾಡಿ ವೈಜ್ಞಾನಿಕ ಮನೋವೃತ್ತಿ ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪುರಕವೇ ಅಥವಾ ವಿರುದ್ದವೇ ಎಂಬ ಚಿಂತನೆಗಳು ಆಗಿದ್ದಾಂಗೆ ಯುವಜನರಲ್ಲಿ ಮೂಡಬೇಕು, ಪ್ರತಿ ವಿದ್ಯಾರ್ಥಿಯು ಮತ್ತು ಯುವಜನತೆ ಪ್ರಶ್ನಿಸುವ ಮೂಲಕ ಅದರ ವಿಮರ್ಶೆ ಮಾಡುವ ಮತ್ತು ಸತ್ಯವನ್ನು ತಿಳಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯದರ್ಶಿ ಜಗನ್ನಾಥ ಕೆ.ವಿ ಮಾತನಾಡಿ ವಿಜ್ಞಾನ ಒಂದು ನಿರಂತರ ಹುಡುಕಾಟ ಇಲ್ಲಿ ಎಲ್ಲದಕ್ಕೂ ಪರಿಹಾರವಿಲ್ಲ ಆದರೆ ಪರಿಹಾರದ ಅಂತಿಮ ಭರವಸೆ ವಿಜ್ಞಾನವೇ ಹೊರತು ಧರ್ಮವಲ್ಲ. ನರೇಂದ್ರ ದಾಬೋಲ್ಕರ್ ರವರು ವೈಜ್ಞಾನಿಕ ವಿಚಾರಧಾರೆಗಳನ್ನು ಬಿತ್ತಿ ಮೂಡನಂಬಿಕೆಗಳ ವಿರುದ್ದ ಸಮರ ಸಾರಿ ವಿಜ್ಞಾನ ಜಾಗೃತಿ ಮೂಡಿಸಿದರು.
ಸಮಾರಂಭದಲ್ಲಿ ಮುಖಂಡರುಗಳಾದ ಕೊಂಡರಾಜನಹಳ್ಳಿ ಮಂಜುಳ, ಶಿಕ್ಷಕ ಸುಬ್ರಮಣಿ, ಗ್ರಾಮಲೆಕ್ಕಿಗರಾದ ಎಂ.ಆರ್ ಶಿವಣಗಿ, ಮಹೇಶ್, ಮರಾರಿ, ವಾರ್ಡನ್ ವೆಂಕಟಗಿರಿಯಪ್ಪ ಮತ್ತು ಇತರರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ನಗರದ ನಚಿಕೇತನ ನಿಲಯದಲ್ಲಿ ಸಮಿತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಉದ್ಘಾಟಿಸಿದರು.ತನೆ, ಸಂಶೋಧನೆಗಳನ್ನು ಪ್ರೋತ್ಸಾಹಿಸಲು ಕರೆ
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್
