ರಾಯಚೂರು, 3 ಜನವರಿ(ಹಿ.ಸ):
ಆ್ಯಂಕರ್ : ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿರುವಾಗ ಶ್ರೀರಾಮ ಮಂದಿರಕ್ಕಾಗಿ ಹೋರಾಡಿದ 31 ವರ್ಷದ ಹಳೆಯ ಪ್ರಕರಣವನ್ನು ಕೆದಕಿ ರಾಮಭಕ್ತನನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿರುವುದು ಹಿಂದು ವಿರೋಧಿ ನೀತಿಗೆ ಸಾಕ್ಷಿಯಾಗಿದೆ.
ರಾಯಚೂರುಲ್ಲಿ ಬಿಜೆಪಿ ಬುಧವಾರ ನಡೆಸಿದ ಪ್ರತಿಭಟನೆಯಲ್ಲಿ, ರಾಮಭಕ್ತರಿಗಾಗಿ ಪೆÇಲೀಸ್ ಇಲಾಖೆಯನ್ನು ಛೂ ಬಿಟ್ಟಿರುವ ಕಾಂಗ್ರೆಸ್ ನೇತೃತ್ವದ ಹಿಂದೂ ವಿರೋಧಿ ಮನಸ್ಥಿತಿಯ ರಾಜ್ಯ ಸರ್ಕಾರದ ನಡೆಯನ್ನು ಭಾಜಪ ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
31ವರ್ಷಗಳ ಹಳೆಯ ಪ್ರಕರಣವನ್ನು ಕೆದಕಿರುವ ಇಂತಹ ವಿಕೃತ ಮನಸ್ಸಿನ , ರಾಜ್ಯ ಸರ್ಕಾರ ಸಮಸ್ತ ದೇಳದ ಹಿಂದೂಗಳ ಭಾವನೆಗಳಿಗೆ ಹಾಗೂ ಶ್ರದ್ಧೆಗೆ ಘಾಸಿ ಮಾಡಲು ಹೊರಟಿದ್ದು ಅತ್ಯಂತ ಹೇಯ ಕೃತ್ಯ. ಪದೇ ಪದೇ ತನ್ನ ಹಿಂದೂ ವಿರೋದಿ ನೀತಿಗಳನ್ನು ಪ್ರದರ್ಶಿಸಿ ತನ್ನ ಓಲೈಕೆ ರಾಜಕಾರಣವನ್ನು ದೇಶದ ಸಮಸ್ತ ಸನಾತನಿಗಳು ಕ್ಷಮಿಸುವುದಿಲ್ಲ. ಇಂತಹ ಕೃತ್ಯಗಳು ಕೈಬಿಟ್ಟು ,ಬಂಧಿಸಿದ ರಾಮ ಭಕ್ತರನ್ನು ಕೂಡಲೇ ಬಿಡುಗಡೆ ಮಾಡಲು ಭಾಜಪ ಆಗ್ರಹಿಸಿತು.
