ದೆಹಲಿ, 4 ಜನವರಿ(ಹಿ.ಸ):
ಆ್ಯಂಕರ್ :ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಡಾ.ಎಸ್.ಜೈಶಂಕರ್ ಎರಡು ದಿನಗಳ ಭೇಟಿಗಾಗಿ ಇಂದು ನೇಪಾಳಕ್ಕೆ ತೆರಳಲಿದ್ದಾರೆ.
ನೇಪಾಳದ ವಿದೇಶಾಂಗ ಸಚಿವ ಎನ್.ಪಿ.ಸೌದ್ ಅವರ ಆಹ್ವಾನದ ಮೇರೆಗೆ ಕಠ್ಮಂಡುವಿನಲ್ಲಿ ಭಾರತ-ನೇಪಾಳ್ ಜಂಟಿ ಆಯೋಗದ ೭ನೇ ಸಭೆಯ ಸಹ ಅಧ್ಯಕ್ಷತೆಯನ್ನು ಡಾ.ಜೈಶಂಕರ್ ವಹಿಸಲಿದ್ದಾರೆ.
೧೯೮೭ರಲ್ಲಿ ಸ್ಥಾಪಿತವಾಗಿರು ಭಾರತ-ನೇಪಾಳ್ ಜಂಟಿ ಆಯೋಗ ದ್ವಿಪಕ್ಷೀಯ ಸಹಭಾಗಿತ್ವದ ಎಲ್ಲ ವಿಚಾರಗಳ ಪರಿಶೀಲನೆ ನಡೆಸುವ ವೇದಿಕೆಯಾಗಿದೆ. ಸಚಿವ ಡಾ.ಜೈಶಂಕರ್ ತಮ್ಮ ನೇಪಾಳ್ ಭೇಟಿ ಸಂದರ್ಭದಲ್ಲಿ ಅಲ್ಲಿನ ವಿವಿಧ ರಾಜಕೀಯ ದುರೀಣರನ್ನು ಭೇಟಿಯಾಗಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
