
ಬಳ್ಳಾರಿ, 21 ಆಗಸ್ಟ್ (ಹಿ.ಸ.) :
ಆ್ಯಂಕರ್ : ಡಿ. ಕಗ್ಗಲ್ಲು ಗ್ರಾಮ ನಿವಾಸಿ ಶ್ರೀಮತಿ ಕೆ.ಎಂ. ಶಿವರುದ್ರಮ್ಮ (82) ಅವರು ಬುಧವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರಿಗೆ, ಕನ್ನಡಪ್ರಭದ ಹಿರಿಯ ವರದಿಗಾರ ಕೆ.ಎಂ. ಮಂಜುನಾಥ ಸೇರಿ ಎಂಟು ಪುತ್ರರು, ಮತ್ತು ಪುತ್ರಿ ಇದ್ದಾರೆ.
ಮೃತರ ಅಂತ್ಯಕ್ರಿಯೆಯು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಗುರು ಹಿರಿಯರ ಸಮ್ಮುಖದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮೃತರ ಆತ್ಮಕ್ಕೆ ಶಾಂತಿ ಕೋರಿ ವಿಧಾನ ಪರಿಷತ್ ಸದಸ್ಯ ವೈ.ಎಂ. ಸತೀಶ್, ಶಾಸಕರಾದ ನಾರಾ ಭರತರೆಡ್ಡಿ, ಬಿ. ನಾಗೇಂದ್ರ, ಮಾಜಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್ ಹಾಗೂ ಪಕ್ಷಗಳ
ಸಂಘ – ಸಂಸ್ಥೆಗಳ ಗಣ್ಯರು, ಪದಾಧಿಕಾರಿಗಳು, ಕಾರ್ಯಕರ್ತರು, ಅಧಿಕಾರಿಗಳು ಮತ್ತು ಪತ್ರಕರ್ತರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ಕೆ.ಎಂ. ಮಂಜುನಾಥ್, : 98453 27187 ಸಂಪರ್ಕಿಸಿರಿ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್
