ಬೆಂಗಳೂರು, 9 ಡಿಸೆಂಬರ್(ಹಿ.ಸ):
ಆ್ಯಂಕರ್ :ಬಸವನಗುಡಿಯ ಕಡಲೆಕಾಯಿ ಪರಿಷೆ ಇಂದಿನಿಂದ ಆರಂಭವಾಗಲಿದ್ದು, ದೊಡ್ಡ ಗಣೇಶ ದೇವಸ್ಥಾನದ ಸುತ್ತ – ಮುತ್ತ ಜಾತ್ರೆಯ ವಾತಾವರಣ ಮನೆ ಮಾಡಿದೆ. ಈ ವರ್ಷ 5 ದಿನ ಪರಿಷೆ ನಡೆಯಲಿದೆ. ಬಸವನಗುಡಿಯ ಸುತ್ತ – ಮುತ್ತಾ ವ್ಯಾಪರಸ್ಥರು ಅಂಗಡಿಗಳನ್ನ ಹಾಕಿದ್ದು, ಬುಲ್ ಟೆಂಪಲ್ ರಸ್ತೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಈ ವರ್ಷದ ಪರಿಷೆ ಸೋಮವಾರದಿಂದ ಅಧಿಕೃತವಾಗಿ ಆರಂಭವಾಗಲಿದ್ದು, ದೊಡ್ಡ ಬಸವಣ್ಣನಿಗೆ ಹಾಗೂ ದೊಡ್ಡ ಗಣೇಶನಿಗೆ ಕಡಲೆಯಿಂದ ಅಭಿಷೇಕ ಮಾಡುವ ಮೂಲಕ ಮುಜುರಾಯಿ ಸಚಿವರಿಂದ ಉದ್ಘಾಟನೆ ಮಾಡುವುದು ಪ್ರತೀತಿ. ಆದ್ರೆ ಈ ವರ್ಷ ಪರಿಷೆಗೆ ಎರಡು ದಿನದ ಮೊದಲೇ ಜಾತ್ರೆಯ ವಾತಾವರಣ ಮನೆಮಾಡಿದೆ.ಈ ವರ್ಷದ ಕಡಲೆಕಾಯಿ ಪರಿಷೆಗೆ ವಿವಿಧ ಜಿಲ್ಲೆಗಳಿಂದ 200 ಜನ ರೈತರು ಹಾಗೂ ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ವ್ಯಾಪಾರಸ್ಥರು ಬರಲಿದ್ದು, 15 ಕ್ಕು ಹೆಚ್ಚು ಬಗೆಯ ಕಡಲೆಕಾಯಿಗಳ ಸ್ಟಾಲ್ ಗಳನ್ನ ಹಾಕಲಾಗಿದೆ.
ಹಿಂದೂಸ್ತಾನ್ ಸಮಾಚಾರ್
