ಬೆಂಗಳೂರು, 13 ಜನವರಿ(ಹಿ.ಸ):
ಆ್ಯಂಕರ್ :ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದಲ್ಲಿ ಚಿನ್ನದ ಪಳ್ಳಿಯೂ ಆಗಲಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಸಂಸದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಿಸುವ ಬಗ್ಗೆ ನಾನೇನು ಪೊಲೀಸರಿಗೆ ಸೂಚನೆ ಕೊಟ್ಟಿಲ್ಲ. ಪೊಲೀಸರಿಗೆ ಅವರ ಕೆಲಸ ಏನು ಎಂದು ಗೊತ್ತಿದೆ, ಅವರು ಮಾಡುತ್ತಾರೆ. ಅನಂತಕುಮಾರ್ ವಿರುದ್ಧ ಕಾನೂನಿನಡಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕೇಂದ್ರದಲ್ಲಿ ಸಚಿವರಾಗಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು. ಯಾರೂ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದರು.
ಶಾಂತಿ ಕದಡುವ ರೀತಿ ಮಾತಾಡುವುದು ಸರಿಯಾ ಎಂದು ನೀವೇ ಯೋಚಿಸಿ ಎಂದು ಪರಮೇಶ್ವರ್ ಕೇಳಿದರು. ಪ್ರಚೋದನೆಯಿಂದ ಅನಾಹುತ ನಡೆದರೆ ಯಾರು ಹೊಣೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾರು ಪ್ರೇರೇಪಿಸಿದ್ದಾರೋ ಗೊತ್ತಿಲ್ಲ, ರಾಮನೇ ಅವರಿಗೆ ಒಳ್ಳೆಯ ಮನಸ್ಸು ನೀಡಲಿ. ಏನಾದರೂ ಘಟನೆಗಳು ನಡೆದರೆ ಅನಂತಕುಮಾರ್ ಜವಾಬ್ದಾರಿ ಆಗುತ್ತಾರೆ. ಬೇರೆಯವರನ್ನು ಹೊಣೆ ಮಾಡಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್
