ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತೀಗೂಡೂರ ಗ್ರಾಮದ ಬ್ರಿಡ್ಜ್ ಬಳಿ ವಿ ಆರ್ ಎಲ್ ಬಸ್ ಪಲ್ಟಿ ಹೊಡೆದ ಪರಿಣಾಮ, ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 7 ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.
BulletsIn
- ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ವಿ ಆರ್ ಎಲ್ ಬಸ್ ಪಲ್ಟಿ ಹೊಡೆದಿದೆ.
- ಹತ್ತೀಗೂಡೂರ ಗ್ರಾಮದ ಬ್ರಿಡ್ಜ್ ಬಳಿ ಬಸ್ ಪಲ್ಟಿಯಾಗಿದೆ.
- ಬಸ್ ಪಲ್ಟಿಯಿಂದ ಇಬ್ಬರು ಸಾವನ್ನಪ್ಪಿದ್ದಾರೆ.
- ಸಾವನ್ನಪ್ಪಿದ ಇಬ್ಬರು ಕಲಬುರ್ಗಿಯ ನಿವಾಸಿಗಳು.
- 7 ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.
- ಬಸ್ ಕಲಬುರ್ಗಿಯಿಂದ ಬೆಂಗಳೂರು ಕಡೆ ತೆರಳುತ್ತಿತ್ತು.
- ಬಸ್ ನಲ್ಲಿ 37 ಜನ ಪ್ರಯಾಣಿಕರು ಇದ್ದರು.
- ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
- ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದು ಶಹಾಪುರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
- ಸ್ಥಳದಲ್ಲಿ ಪೊಲೀಸರು ಗಾಯಾಳುಗಳನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ.
