ಬಳ್ಳಾರಿ, 21 ಫೆಬ್ರವರಿ :
ಆ್ಯಂಕರ್ : ನಗರದ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಉತ್ಸವವು ಮಾ.09 ರ ವರೆಗೆ ಜರಗುತ್ತಿದ್ದು, ಫೆ.24 ರಂದು ಬ್ರಹ್ಮರಥೋತ್ಸವು ನಡೆಯಲಿದೆ. ಇದರ ಅಂಗವಾಗಿ ನಾಳೆ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ಮತ್ತು ಪಾರ್ವತಿ ದೇವಿಯ ಕಲ್ಯಾಣೋತ್ಸವ ಹಾಗೂ ವಿಶೇಷವಾಗಿ ಮೊದಲ ಬಾರಿಗೆ ಶಿವಗಂಗಾ ಆರತಿ ವಿಶೇಷ ಪೂಜಾ ಕೈಂಕರ್ಯಗಳ ಕಾರ್ಯಕ್ರಮವು ಸಂಜೆ 7 ಗಂಟೆಗೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು, ಸಾರ್ವಜನಿಕರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮಹಾನಗರಪಾಲಿಕೆಯ ಮಹಾಪೌರರು ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸುವರು ಎಂದು ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಅವರು ತಿಳಿಸಿದ್ದಾರೆ.
