ಹಂಪಿ ಉತ್ಸವ , 3 ಫೆಬ್ರವರಿ :
ಆ್ಯಂಕರ್ : ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬೇಕಿರುವ ವಿಜಯನಗರ ಸಾಮ್ರಾಜ್ಯದ ಪ್ರಮುಖ ದೊರೆ ಶ್ರೀಕೃಷ್ಣದೇವರಾಯರ ಆಡಳಿತ ಮಾದರಿ ಇಂದಿಗೂ ಪ್ರಸ್ತುತವಾಗಿದ್ದು, ಸರ್ವರನ್ನು ಸಮಾನವಾಗಿ ಕಾಣುವ ಆಡಳಿತ ವ್ಯವಸ್ಥೆಯನ್ನೇ ನಮ್ಮ ಸರ್ಕಾರವೂ ಹೊಂದಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಹಂಪಿಯ ಗಾಯತ್ರಿ ಪೀಠ ಬಳಿ ಅತ್ಯಂತ ಕಲಾತ್ಮಕವಾಗಿ ನಿರ್ಮಿಸಿರುವ ಪ್ರಧಾನ ವೇದಿಕೆಯಲ್ಲಿ ಐತಿಹಾಸಿಕ ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಕ್ಕ-ಬುಕ್ಕರು ಪ್ರಾರಂಭಿಸಿದ ವಿಜಯನಗರ ಸಾಮ್ರಾಜ್ಯ 500 ವರ್ಷಗಳ ಹಿಂದಿನ ಭವ್ಯ ಇತಿಹಾಸವಾಗಿದ್ದು, ವಿಜಯನಗರ ಸಾಮ್ರಾಜ್ಯ ಅನೇಕ ಬಾರಿ ಮೊಘಲರನ್ನು ಹಿಮ್ಮೆಟ್ಟಿಸಿ ಆಡಳಿತ ಮಾಡಿದೆ. ಇಡೀ ಜಗತ್ತಿನ ಗಮನ ಸೆಳೆದ ಕೃಷ್ಣದೇವರಾಯರ ಆಡಳಿತ ಇಂದಿಗೂ ಪ್ರಸ್ತುತವಾಗಿದೆ.
ಈ ನಾಡಿನ ಸಂಸ್ಕøತಿ, ಭಾμÉ , ಪರಂಪರೆಯ ರಕ್ಷಣೆ, ಜನಸಾಮಾನ್ಯರನ್ನು ಸಮಾನವಾಗಿ ಕಾಣುವ ಅವರ ಆಡಳಿತವೇ ನಮಗೂ ಮಾದರಿಯಾಗಿದೆ. ಆಗಲೂ ಕೂಡ ಜಾತಿ ವ್ಯವಸ್ಥೆ ಇತ್ತು, ಆದರೂ ಕೃಷ್ಣದೇವರಾಯರು ಎಲ್ಲ ವರ್ಗದವರನ್ನೂ ಸಮಾನತೆಯಲ್ಲಿ ಕಾಣುತ್ತಿದ್ದರು. ನಮ್ಮ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯ ನೀಡುವಂತಹ ಯೋಜನೆಗಳ ಮೂಲಕ ಮಾದರಿಯಾಗಿದೆ.
ಹಂಪಿ ಇಡೀ ವಿಶ್ವದ ಗಮನ ಸೆಳೆಯುವ ಪ್ರವಾಸಿ ತಾಣವಾಗಿದ್ದು, ಇತಿಹಾಸ ಮೆಲಕು ಹಾಕುವ ರೀತಿಯಲ್ಲಿ ಈ ಬಾರಿ ಹಂಪಿ ಉತ್ಸವ ವೈಭವದಿಂದ ಆಚರಿಸಲಾಗುತ್ತಿದೆ. ಉತ್ಸವವು ನಮ್ಮ ಸಂಸ್ಕøತಿ, ಪರಂಪರೆಯನ್ನು ನೆನೆಸಿಕೊಳ್ಳುವಂತಿದೆ ಎಂದರು.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಮಾತನಾಡಿ, ಹಂಪಿ ಉತ್ಸವ ಈ ಭಾಗದ ಜನರಿಗೆ ನಾಡ ಹಬ್ಬ ಇದ್ದಂತೆ, ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. 2013 ರಿಂದ 2018 ಮುಖ್ಯಮಂತ್ರಿ ಸಿದ್ದರಾಯಮ್ಯ 5 ಬಾರಿ ಹಂಪಿ ಉತ್ಸವ ಉದ್ಘಾಟಿಸಿದ್ದರು. ಈ ಬಾರಿಯೂ ಉತ್ಸವ ಉದ್ಘಾಟಿಸಿ ದಾಖಲೆ ಬರೆದಿದ್ದಾರೆ. ಸರ್ಕಾರ 5 ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ 60,000 ಕೋಟಿ ರೂ. ಖರ್ಚು ಮಾಡುತ್ತಿದೆ.
ಇದರ ನಡುವೆ ಮುಖ್ಯಮಂತ್ರಿಗಳು ಬಡವರಿಗಾಗಿ 6 ನೇ ಗ್ಯಾರೆಂಟಿ ಯೋಜನೆ ಮಾದರಿಯಲ್ಲಿ ಸರ್ಕಾರದಿಂದ 2.38 ಲಕ್ಷ ಫಲಾನುಭವಿಗಳು ಮನೆ ಮಂಜೂರು ಮಾಡಲು ಸಮ್ಮತಿಸಿದ್ದಾರೆ. ಈಗಾಗಲೇ ರಾಜ್ಯದ ವಸತಿ ಯೋಜನೆಗಳಿಗೆ ರೂ.8,400 ಕೋಟಿ ಅನುದಾನ ಮಂಜೂರು ಮಾಡಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ಈಗಾಗಲೆ ರೂ.500 ಕೋಟಿ ಬಿಡುಗಡೆ ಮಾಡಿದ್ದಾರೆ.
ಕೆಲ ತಿಂಗಳಿನಲ್ಲಿಯೇ 36,000 ಜನರಿಗೆ ಸರ್ಕಾರದಿಂದ ಮನೆ ನೀಡಲಾಗುವುದು. ಮನೆ ನಿರ್ಮಾಣಕ್ಕೆ ರೂ.7.5 ಲಕ್ಷ ಖರ್ಚು ಆಗುತ್ತದೆ. ಬಡವರು ತಮ್ಮ ಪಾಲಿನ ವಂತಿಕೆ ನೀಡಲು ಶಕ್ತರಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಈ ಸರ್ಕಾರದ ಅವಧಿಯಲ್ಲಿ 2.3 ಲಕ್ಷ ಫಲನಾಭವಿಗಳಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಅವರು ಹೇಳಿದರು.
ವಿಜಯನಗರ ಹೊಸ ಜಿಲ್ಲೆಯಾಗಿದೆ. ಉಸ್ತುವಾರಿ ಸಚಿವನಾದ ಮೇಲೆ ಪ್ರತಿ ತಾಲ್ಲೂಕಿಗೆ ತೆರಳಿ ಹಾಗೂ ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆಸಿದ್ದೇನೆ. ಜಿಲ್ಲೆಯ ಎಲ್ಲಾ ಸಮಸ್ಯೆಗಳು ಅರಿತು ಸರ್ಕಾರದ ಮಟ್ಟದಲ್ಲಿ ಪರಿಹಾರ ಒದಗಿಸಲು ಸ್ವತಃ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ಸಚಿವ ಜಮೀರ್ ಅಹ್ಮದ್ ಮುಖ್ಯಮಂತ್ರಿಗಳಿಗೆ ಕೋರಿದರು.
ಯುವ ಜನ ಸೇವಾ ಮತ್ತು ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ ನಾಗೇಂದ್ರ ಮಾತನಾಡಿ, ಸಂಸ್ಕøತಿ ಹಾಗೂ ಸಂಪ್ರದಾಯಗಳ ಬಗ್ಗೆ ಜನರಿಗೆ ತಿಳಿಸಲು ಉತ್ಸವಗಳು ಆಯೋಜನೆ ಮುಖ್ಯವಾಗಿದೆ. ವಿಜಯನಗರ ಅರಸ ಕೃಷ್ಣದೇವರಾಯ ಆಡಳಿತವನ್ನು ವಿಶ್ವ ಮಟ್ಟಕ್ಕೆ ಏರಿಸಿದರು. ಅದೇ ರೀತಿ ಮುಖ್ಯಮಂತ್ರಿಗಳು ದೇಶದಲ್ಲೇ ರಾಜ್ಯವನ್ನು ಮುಂಚೂಣಿ ಮುನ್ನಡಿಸುತ್ತಿದ್ದಾರೆ. ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವದ ಅಡಿ ಜಾರಿತಂದ 5 ಗ್ಯಾರೆಂಟಿ ಯೋಜನೆಗಳು ಯಶಸ್ವಿಯಾಗಿವೆ. ರಾಮ ರಾಜ್ಯದಂತೆ ಸಿದ್ದರಾಮಯ್ಯನವರ ಆಡಳಿತದಲ್ಲಿ ರಾಜ್ಯವು ಸುಭೀಕ್ಷವಾಗಿದೆ ಎಂದರು.
.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ, ಉತ್ಸವ ಆಯೋಜನೆಯಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಅದಕ್ಕಾಗಿಯೇ ಮೂರು ವೇದಿಕೆಗಳಲ್ಲಿ ನಿರ್ಮಿಸಲಾಗಿದೆ. ಅಚ್ಚುಕಟ್ಟಾಗಿ ಉತ್ಸವ ಆಯೋಜನೆ ಮಾಡಿರುವ ಕುರಿತು ಕಲಾವಿದರು ಮೆಚ್ಚುವೆ ವ್ಯಕ್ತ ಪಡಿಸಿದ್ದಾರೆ ಎಂದರು.
ಉದ್ಘಾಟನೆ ಸಮಾರಂಭದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಜಯ್ ಸಿಂಗ್, ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್, ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ, ಕಂಪ್ಲಿ ಶಾಸಕ ಜಿ.ಎನ್.ಗಣೇಶ್, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ, ಶಿರುಗುಪ್ಪ ಶಾಸಕ ನಾಗರಾಜ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಜೋಗತಿ ಮಂಜಮ್ಮ, ಹಂಪಿ ಗ್ರಾ.ಪಂ.ಅಧ್ಯಕ್ಷ ರಜನಿ ಷಣ್ಮುಖ, ಮಾಜಿ ಸಂಸದ ಐ.ಜಿ.ಸನದಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಬಳ್ಳಾರಿ ವಲಯದ ಐಜಿಪಿ ಲೋಕೇಶ್ಕುಮಾರ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸದಾಶಿವಪ್ರಭು.ಬಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹರಿಬಾಬು.ಬಿ.ಎಲ್ ಸೇರಿದಂತೆ ಇತರೆ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.
