ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ನಿಯಮಿತ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ, ಇಂದು (ನವೆಂಬರ್ 28, 2024) ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಸಂಬಂಧ ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳು ಹಾಗೂ ಸಮಯದ ವಿವರವನ್ನು ನೀಡಿದೆ.
BulletsIn
- ಇಂದು (ನವೆಂಬರ್ 28, 2024) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
- ತುರ್ತು ನಿರ್ವಹಣಾ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಈ ವಿದ್ಯುತ್ ಕಡಿತವಾಗುತ್ತಿದೆ.
- ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಇರುತ್ತದೆ.
- ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಸಂಜೆಯವರೆಗೆ ಇರಲಿದೆ.
- ಎರ್‌ಪೋರ್ಟ್ ರಸ್ತೆ, ಕೋಡಿಹಳ್ಳಿ, 16 ಮತ್ತು 19ನೇ ಮುಖ್ಯರಸ್ತೆಗಳಲ್ಲಿ ವಿದ್ಯುತ್ ಕಡಿತ.
- ಎಚ್‌ಎಎಲ್ 2ನೇ ಹಂತ, ಕಾಲ್ಟನ್ ಟವರ್ಸ್, ಎನ್‌ಎಎಲ್ ಕಾಂಪೌಂಡ್, ಕೋಡಿಹಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.
- ರಾಮ ಟೆಂಪಲ್ ರಸ್ತೆ, ವೆಂಕಟೇಶ್ವರ ಕಾಲೋನಿ, ಬೂಮರೆಡ್ಡಿ ಕಾಲೋನಿ, 515 ಕಾಲೋನಿ, ಕೋಡಿಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಡಿತ.
- 17, 18 ಹಾಗೂ 19ನೇ ಅಡಿ ಮುಖ್ಯರಸ್ತೆ, ಸರ್ವೀಸ್ ರಸ್ತೆ 100, 13ನೇ ಎಚ್, 12ನೇ ಮುಖ್ಯರಸ್ತೆಗಳಲ್ಲಿ ವಿದ್ಯುತ್ ವ್ಯತ್ಯಯ.
- ದೊಮ್ಮಲೂರು 2ನೇ ಹಂತ, 6ನೇ ಮುಖ್ಯ ಡಿಫೆನ್ಸ್ ಕಾಲೋನಿ, 80 ಅಡಿ ರಸ್ತೆ, 11ನೇ ಮುಖ್ಯರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತ.
- ಚರ್ಚ್ ಸ್ಟ್ರೀಟ್, ಸೇಂಟ್ ಮಾರ್ಕ್ಸ್ ರಸ್ತೆ, ಲ್ಯಾವೆಲ್ಲೆ ರಸ್ತೆ, ರಿಚ್ಮಂಡ್ ರಸ್ತೆ, ಟ್ರಿನಿಟಿ ಸರ್ಕಲ್, ಹಲಸೂರು ರಸ್ತೆ, ಇತರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ.
