ಶಿವಮೊಗ್ಗ,
ಆ್ಯಂಕರ್ :ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಆಗ್ತಿದ್ದಂತೆ ದಕ್ಷಿಣದಿಂದಲೇ ಮೋದಿ ದಂಡ ಯಾತ್ರೆ ಆರಂಭವಾಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕವನ್ನೇ ಫೋಕಸ್ ಮಾಡಿರುವ ನಮೋ, ಮಿಷನ್ ಸೌಥ್ ಸಕ್ಸಸ್ ಗೆ ರಣತಂತ್ರ ರೂಪಿಸಿದ್ದಾರೆ. ಮೊನ್ನೆ ಮಲ್ಲಿಕಾರ್ಜುನ ಖರ್ಗೆರವರ ಕೋಟೆಯಲ್ಲಿ ಘರ್ಜಿಸಿದ ಪ್ರಧಾನಿ, ಇಂದು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರಣಕಹಳೆ ಮೊಳಗಿಸಲಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ಏರಿಕೆ ಆಗ್ತಿದೆ. ಎಲೆಕ್ಷನ್ ಅಖಾಡ ಸದ್ದಿಲ್ಲದೇ ಸೌಂಡ್ ಶುರು ಮಾಡಿದೆ. 3 ಪಕ್ಷಗಳು ಭರ್ಜರಿ ತಾಲೀಮು ಆರಂಭಿಸಿದ್ದು, ಪ್ರಚಾರ ತಂತ್ರದಲ್ಲಿ ಕಮಲ ಪಡೆ ಒಂದು ಹೆಜ್ಜೆ ಮುಂದೇ ಇದೆ. ಮತಬೇಟೆಗೆ ಸ್ವತಃ ಮೋದಿ ನೇತೃತ್ವ ವಹಿಸಿದ್ದು, ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಮತದಾನಕ್ಕೂ ಮೊದಲೇ ಕೇಸರಿ ಅಲೆ ಸೃಷ್ಟಿಗೆ ಭೂಮಿ ಹದ ಮಾಡ್ತಿದ್ದಾರೆ. ಮೊನ್ನೆ ಕಲಬುರ್ಗಿಯಲ್ಲಿ ಧೂಳೆಬ್ಬಿಸಿದ್ದ ಮೋದಿ, ಇಂದು ಮಲೆನಾಡಲ್ಲಿ ಪ್ರಚಾರದ ಕಿಚ್ಚೆಬ್ಬಿಸಲಿದ್ದಾರೆ.
ಬೆಳಗ್ಗೆ ತೆಲಂಗಾಣ ಪ್ರಚಾರ ಮುಗಿಸಿ ಪ್ರಧಾನಿ ಮೋದಿ, ಶಿವಮೊಗ್ಗಕ್ಕೆ ಆಗಮಿಸ್ತಿದ್ದಾರೆ. ಶಿವಮೊಗ್ಗದ ಅಲ್ಲಮಪ್ರಭು ಫ್ರೀಡಂಪಾರ್ಕ್ ನಲ್ಲಿ ಮೋದಿ ಸಭೆ ಆಯೋಜನೆ ಆಗಿದೆ. ಮಧ್ಯಾಹ್ನ 1.15ಕ್ಕೆ ಪ್ರಧಾನಿ ಆಗಮಿಸಲಿದ್ದಾರೆ. 3-4 ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೂರನೇ ಬಾರಿ ಶಿವಮೊಗ್ಗಕ್ಕೆ ಮೋದಿ ಬರುತ್ತಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸುಮಾರು 10ಕಿ ಮಿ ದೂರದ ರಸ್ತೆ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದ್ದಾರೆ. ಬಳಿಕ ಒಂದೂವರೆ ಗಂಟೆಗಳ ಕಾಲ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ತೆರಳಲಿದ್ದಾರೆ. ಸಂಜೆ 4ಕ್ಕೆ ತಮಿಳುನಾಡಿನ ಕೊಯಮತ್ತೂರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
