ವಿಜಯಪುರ,
ಆ್ಯಂಕರ್ : ನನ್ನ ಬಿಟ್ಟರೆ ಯಾರಿಗೂ ಟಿಕೆಟ್ ಕೊಡಲ್ಲ. ಪಕ್ಷದವರು ನನಗೆ ಸ್ಪಷ್ಟವಾಗಿ ಹೇಳಿದ್ದಾರೆ. ನೀ ಏನು ಚಿಂತೆ ಮಾಡಬೇಡ, ನೀನು ಸತ್ತರೂ ಜನ ನಿನ್ನು ಹೆಣಕ್ಕೆ ಮತ ಹಾಕಲಿ ಎಂದು ವರಿಷ್ಠರು ನನಗೆ ಹೇಳಿದ್ದಾರೆ. ನನ್ನ 70 ವರ್ಷಗಳ ರಾಜಕಾರಣದಲ್ಲಿ ನನಗೆ ಯಾರು ಅಡ್ಡ ಬಂದಿದ್ದಾರೆ ಅವರು ಯಾರೂ ಬದುಕಿಲ್ಲ. ನನ್ನ ವಿರೋಧ ಮಾಡಿದವರು ಯಾರು ರಾಜಕೀಯದಲ್ಲಿ ಉಳಿದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ದಲಿತ ವ್ಯಕ್ತಿಯಾಗಿ ಇತಿಹಾಸ ನಿರ್ಮಾಣ ಮಾಡಿದ್ದೇನೆ. ನನಗೆ 93 ವಯಸ್ಸಾದರೂ ಇತಿಹಾಸ ನಿರ್ಮಾಣ ಮಾಡಿಯೇ ಸಾಯುತ್ತೇನೆ. ನಾನು ಇತಿಹಾಸ ನಿರ್ಮಾಣ ಮಾಡಲಿ ಎಂದು ದೇವರು ನನ್ನ ಹಣೆ ಬರಹದಲ್ಲಿ ಬರೆದಿದ್ದಾನೆ. ಅಲ್ಲಿಯವರಗು ನಾನು ಬದುಕುತ್ತೇನೆ. ನಾನು ಕ್ರಿಕೆಟ್ ಆಡಲು ಬ್ಯಾಟ್ ಹಿಡಿದುಕೊಂಡು ನಿಂತಿದ್ದೇನೆ. ಬಾಲ್ ಬರುವುದನ್ನೇ ಕಾಯುತ್ತಿದ್ದೇನೆ ಎಂದರು.
ನನ್ನ ಆರೋಗ್ಯದ ಕುರಿತು ಬಹಳ ಜನ ಅಪಪ್ರಚಾರ ಮಾಡಿದರು. ನಾನು ಆಸ್ಪತ್ರೆಯಲ್ಲಿದ್ದೇನೆ, ಮೃತಪಡುತ್ತೇನೆ ಎಂದು ಬಿಜೆಪಿ ಅಧ್ಯಕ್ಷರ ಮುಂದೆ ಹೇಳಿದ್ದಾರೆ. ನನ್ನ ಸಾವು ಇವರ ಕೈಯಲ್ಲಿ ಇಲ್ಲ. ಹಣೆ ಬರಹವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ನಾನು ಬೇಗ ಸಾಯಲಿ, ಏನಾದರೂ ಆಗಬೇಕೆಂದು ಕೆಲವರು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು
