ಬಳ್ಳಾರಿ
ಆ್ಯಂಕರ್ : ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರ ನೇತೃತ್ವದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಸಿರಿವಾರ ಗ್ರಾಮದಲ್ಲಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಅವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ಮಾಡಿದರು.
ರೋಡ್ ಶೋ ನಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸುವ ಮೂಲಕಗಮನ ಸೆಳೆದರಲ್ಲದೆ. ಗ್ರಾಮಕ್ಕೆ ಬೇಟಿ ನೀಡಿದ ಸಚಿವ ಬಿ.ನಾಗೇಂದ್ರ ಹಾಗೂ ಅಭ್ಯರ್ಥಿ ತುಕಾರಾಂ ಅವರ ಮೇಲೆ ಹೂವಿನ ಮಳೆ ಗೈದು ಪಟಾಕಿ ಸಿಡಿಸಿ ಸಂಭ್ರಮಿಸಿ ಬರ ಮಾಡಿಕೊಂಡರು.
ಇದೇ ವೇಳೆ ಬಿಜೆಪಿಯ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸಚಿವ ನಾಗೇಂದ್ರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ ಸಿರಿವಾರದ ಜನರ ಆಶೀರ್ವಾದದಿಂದ ಗೆದ್ದು ಶಾಸಕನಾಗಿ,ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದೇನೆ, ಅದರಂತೆ ನನಗಿಂತಲೂ ಹೆಚ್ಚಿನ ಮತಗಳನ್ನ ತುಕಾರಾಂ ಅವರಿಗೆ ನೀಡುವಂತೆ ಮನವಿ ಮಾಡಿದರು.
ಚುನಾವಣೆಯಲ್ಲಿ ನೀಡಿದ ಮಾತಿನಂತೆ ಪಂಚ ಗ್ಯಾರೆಂಟಿಗಳನ್ನ ನೀಡುವ ಮೂಲಕ ಮಹಿಳೆಯರು, ಬಡವರು, ದೀನ ದಲಿತರ ಧ್ವನಿಯಾಗಿದ್ದೇವೆ.ಕೊಟ್ಟ ಮಾತಿನಂತೆ ನಡೆದುಕೊಂಡ ವ್ಯೆಕ್ತಿ ಯಾರಾದ್ರು ಇದ್ರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಾತ್ರ. ಕೋಮುವಾದಿ ಪಕ್ಷದ ಜನರು ಬರುತ್ತಾರೆ, ಅವರ ಅಮಿಷಕ್ಕೆ ಬಲಿಯಾಗದೆ ಕಾಂಗ್ರೆಸ್ ಪಕ್ಷದ ಗುರ್ತಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
