ಬಳ್ಳಾರಿ, 16 ಫೆಬ್ರವರಿ :
ಆ್ಯಂಕರ್ : ಎಪಿಎಂಸಿಯನ್ನು ಡಿಜಿಟಲೀಕರಣ ಮಾಡಿರುವುದು ಸ್ವಾಗತಾರ್ಹ. 2018 ರಲ್ಲಿ ಬಳ್ಳಾರಿಗೆ ಘೋಷಣೆಯಾಗಿದ್ದ ಒಣಮೆಣಸಿನಕಾಯಿ ಆಧುನಿಕ ಮಾರುಕಟ್ಟೆ ನಿರ್ಮಾಣ ವಿಷಯ ನೆನೆಗುದಿಗೆ ಬಿದ್ದಿದೆ.
ಸಿದ್ದರಾಮಯ್ಯ ಅವರು ಮೆಣಸಿನಕಾಯಿ ಬೆಳೆಯುವ ಪ್ರದೇಶಕ್ಕೆ ತುರ್ತು ಅಗತ್ಯವಿರುವ ಒಣಮೆಣಸಿನಕಾಯಿ ಮಾರುಕಟ್ಟೆಯನ್ನು ಪ್ರಾರಂಭ ಮಾಡದೇ, ಬೇರೆ ಕಡೆ ಒಣಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣದ ಯೋಜನೆ ಘೋಷಣೆ ಮಾಡಿರುವುದು ಹಾಸ್ಯಾಸ್ಪದ.
ಬಳ್ಳಾರಿ ಜಿಲ್ಲೆಯ ವಾಣಿಜ್ಯ, ವ್ಯಾಪಾರ ಮತ್ತು ಕೈಗಾರಿಕೋದ್ಯಮಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆಗಳಿದ್ದವು. `ಕೃಷಿ ಭಾಗ್ಯ’ ಯೋಜನೆಗೆ ಕೇವಲ 200 ಕೋಟಿ ರೂಪಾಯಿ ಸಾಕಾಗುವುದಿಲ್ಲ. ಬರ ಕಣ್ಣಮುಂದಿದೆ. ರೈತರು ಈಗಾಗಲೇ ಕಂಗೆಟ್ಟಿದ್ದಾರೆ.
ಸರ್ಕಾರ ರೈತರ ನೆರವಿಗೆ ಬರುತ್ತದೆ ಎನ್ನುವ ನಿರೀಕ್ಷೆಗಳು ನಿರೀಕ್ಷೆಗಳಾಗಿವೇ ಉಳಿದಿವೆ. ಆರೋಗ್ಯ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರು ಸಾಕಷ್ಟು ಮಹತ್ವ ನೀಡಿರುವುದು ಪ್ರಸ್ತುತ ತುರ್ತು ಅಗತ್ಯಗಳಲ್ಲಿ ಅತಿ ಮುಖ್ಯವಾಗಿದೆ. ಇದು ಮಿಶ್ರ ಬಜೆಟ್.
