ರಾಯಚೂರು, 29 ನವೆಂಬರ್ (ಹಿ.ಸ):
ಆ್ಯಂಕರ್: ಕೌಶಲ್ಯಾಬಿವೃದ್ಧಿ ಇಲಾಖಾ ವ್ಯಾಪ್ತಿಯ ಸಿಡಾಕ್ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯಮಶೀ¯ತೆಯ ಬಗ್ಗೆ 10 ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಅದರಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪ್ರ.ಪೋತದಾರ ಅವರು ತಿಳಿಸಿದ್ದಾರೆ.
ಅರ್ಜಿಗಳನ್ನುhttps://www.scsptsp.karnataka.gov.in/BMS/CDOC/EDPRegistrationForm.aspx ವೆಬ್ಸೈಟ್ ಮೂಲಕ ನ.30ರೊಳಗಾಗಿ ಸಲ್ಲಿಸಬಹುದಾಗಿದ್ದು, ವಯೋಮಿತಿ ಕನಿಷ್ಟ 21 ವರ್ಷ ಹಾಗೂ ಗರಿಷ್ಟ 50 ವರ್ಷ ಶೈಕ್ಷಣಿಕ ಅರ್ಹತೆ-ಪಿ.ಯು.ಸಿ ಮತ್ತು ಮೇಲ್ಪಟ್ಟವರು ಅರ್ಜಿಯನ್ಮ್ನ ಸಲ್ಲಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರು ತರಭೇತಿ ಸ್ಥಳ: ಜಂಟಿ ನಿರ್ದೇಶಕರು, ಸಿಡಾಕ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ, ರಾಘವೇಂದ್ರ ಕಾಲೋನಿ, ನವೀನ ಹಾಸ್ಪಿಟಲ್ ಪಕ್ಕದಲ್ಲಿ, ಐ.ಬಿ ರಸ್ತೆ ರಾಯಚೂರುಗೆ ಸ್ವತಃ ಬಂದು ಕೂಡ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
