
ಕಲಬುರಗಿ, 29 ಡಿಸೆಂಬರ್(ಹಿ.ಸ):
ಆ್ಯಂಕರ್ :
ಈ ಬಾರಿ ಹೊಸ ವರ್ಷ ಸಂಭ್ರಮಕ್ಕೆ ರಾಜ್ಯದ ಅಬಕಾರಿ ಇಲಾಖೆಯಿಂದ ಕೋಟಿ ಕೋಟಿ ತೆರಿಗೆ ಹಣದ ನಿರೀಕ್ಷೆಯಲ್ಲಿದೆ. ಆದ್ರೆ, ರಾಜ್ಯದಲ್ಲಿ ಮಧ್ಯದ ದರ ಹೆಚ್ಚಾದ ಹಿನ್ನೆಲೆಯಲ್ಲಿ ನೆರೆಯ ಗೋವಾ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳಿಂದ ಮದ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
2024ರ ಹೊಸ ವರ್ಷದ ಸಂಭ್ರಮವನ್ನ ಕೊಂಡಾಡಲು ಇಡೀ ದೇಶವೇ ತುದಿಗಾಲಲ್ಲಿ ನಿಂತಿದೆ. ಈ ಸಂತಸದ ಕ್ಷಣವನ್ನ ಸಂಭ್ರಮಿಸಲು ಲೆಕ್ಕವಿಲ್ಲದಷ್ಟು ಮದ್ಯ ಮಾರಾಟವಾಗುತ್ತೆ. ಆದ್ರೆ ರಾಜ್ಯದಲ್ಲಿ ಮದ್ಯದ ದರ ಗಣನೀಯವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ, ಎಲ್ಲರ ಕಣ್ಣು ಪಕ್ಕದಲ್ಲಿರೋ ಗೋವಾದತ್ತ ನೆಟ್ಟಿದೆ. ಕರ್ನಾಟಕದಲ್ಲಿ ಮದ್ಯದ ದರ ದುಪ್ಪಟ್ಟಾದ ಹಿನ್ನೆಲೆ ನೆರೆಯ ರಾಜ್ಯಗಳಿಂದ ಮದ್ಯ ಆಮದು ಮಾಡಿಕೊಳ್ಳುವ ತಯಾರಿ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್
