ಬೆಂಗಳೂರು, 27 ಡಿಸೆಂಬರ್(ಹಿ.ಸ):
ಆ್ಯಂಕರ್ :
ಬೆಟ್ಟದ ನೆಲ್ಲಿಕಾಯಿ ಆಯುರ್ವೇದದಲ್ಲಿ ವಿಶೇಷ ಆಹಾರ ಪದಾರ್ಥವಾಗಿ ಸೇವನೆ ಮಾಡಲು ಸೂಚನೆ ನೀಡುತ್ತದೆ. ವಿಟಮಿನ್ ಸಿ ಸಮೃದ್ಧವಾಗಿರುವ ಈ ಹುಳಿ ಬೆಟ್ಟದ ನೆಲ್ಲಿಕಾಯಿ ಹಣ್ಣು ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಹಲವು ವಿಧಗಳಲ್ಲಿ ಬಳಕೆ ಮಾಡಲಾಗುತ್ತದೆ. ಅನೇಕ ಜನರು ಇದನ್ನು ಒಣಗಿಸಿ ಅಥವಾ ಕಚ್ಚಾ ತಿನ್ನಲು ತುಂಬಾ ಇಷ್ಟ ಪಡುತ್ತಾರೆ. ಆದರೆ ಅನೇಕರು ಅದರ ರಸ ಸೇವನೆ ಮಾಡಲು ಲೈಕ್ ಮಾಡುತ್ತಾರೆ. ಆಯುರ್ವೇದ ವೈದ್ಯೆ ತಜ್ಜರಾದ ಡಾ ವಿದ್ಯಾಶ್ರೀ- ಅವರ ಆರೋಗ್ಯದ ಗುಟ್ಟು ಕೂಡ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನಲ್ಲಿ ಇದೆ ಎಂದು ಹೇಳುತ್ತಾರೆ.
ಹೀಗಾಗಿ ಬೆಂಗಳೂರಿನ ಹಾಪ್ ಕಾಪ್ಸ್ ಮಳಿಗೆಯಲ್ಲಿ ಬೆಟ್ಟದ ನೆಲ್ಲಿಕಾಯಿ ರಸ ಪಾನೀಯ ಮಾರಾಟ ಮಾಡಲಾಗುತ್ತಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ (ಆಮ್ಲಾ) ತಿನ್ನುವುದು ಅಥವಾ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಮಳಿಗೆಯಲ್ಲಿ ಮಾಹಿತಿ ನೀಡಲಾಗುತ್ತಿದೆ
ಆಮ್ಲಾ ಅಂತ ಕರೆಯುವ ಈ ಕಾಯಿಯ ಬಳಕೆ ಪುರುಷರಿಗೆ ತುಂಬಾ ಪ್ರಯೋಜನಕಾರಿ . ಪುರುಷರು ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಆಯುರ್ವೇದ ವೈದ್ಯೆ ತಜ್ಜರಾದ ಡಾ ವಿದ್ಯಾಶ್ರೀ- ಮಾ ಹಿತಿ ನೀಡಿದ್ದಾರೆ.
ಚಳಿಗಾಲವು ತರುತ್ತದೆ. ಈ ಋತುವಿನಲ್ಲಿ ಬೆಟ್ಟದ ನೆಲ್ಲಿಕಾಯಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಬೆಟ್ಟದ ನೆಲ್ಲಿಕಾಯಿ (ಆಮ್ಲಾ) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಮ್ಲವನ್ನು ಆಯುರ್ವೇದದಲ್ಲಿ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಟ್ಯಾನಿನ್, ರಂಜಕ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ. ಈ ಪದಾರ್ಥಗಳು ಕೂದಲಿಗೆ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಟ್ಟದ ನೆಲ್ಲಿ ತಿನ್ನುವುದು ಅಥವಾ ಇದರ ಜ್ಯೂಸ್ ಕುಡಿಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಲಾಭಗಳು
ಹೃದಯಕ್ಕೆ ಬೆಟ್ಟದ ನೆಲ್ಲಿ ತುಂಬಾ ಉಯೋಗಕಾರಿ : ಫೈಬರ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿರುವ ಬೆಟ್ಟದ ನೆಲ್ಲಿಕಾಯಿ ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರ ಸೇವನೆಯಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧುಮೇಹ ನಿಯಂತ್ರಿಸುತ್ತೆ : ಅಧಿಕ ರಕ್ತದೊತ್ತಡ, ಸಕ್ಕರೆ ಮತ್ತು ಆಕ್ಸಿಡೀಕರಣದ ಲಕ್ಷಣಗಳಿಂದ ದೇಹವನ್ನು ರಕ್ಷಿಸುವ ಕೆಲವು ಗುಣಲಕ್ಷಣಗಳನ್ನು ಬೆಟ್ಟದ ನೆಲ್ಲಿ ಹೊಂದಿದೆ. ಇದರ ಬಳಕೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಪುರುಷರಿಗೆ ಪ್ರಯೋಜನಕಾರಿ : ಬೆಟ್ಟದ ನಲ್ಲಿಕಾಯಿಯಲ್ಲಿ ಇರುವ ವಿಟಮಿನ್ ಸಿ ಪುರುಷರಲ್ಲಿ ಕಡಿಮೆ ಇರುವ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರ ಸೇವನೆಯು ಕೆಲಸದ ಶಕ್ತಿಯನ್ನು ಹೆಚ್ಚಿಸುತ್ತದೆ. ದೈಹಿಕ ಶಕ್ತಿಯನ್ನು ಸುಧಾರಿಸುತ್ತದೆ.
ಮೃದು ತ್ವಚೆಗೆ ಸಹಕಾರಿ : ಖಾಲಿ ಹೊಟ್ಟೆಯಲ್ಲಿ ತಿಂದರೆ ಕಾಲಜನ್ ಡಿಗ್ರ್ಯಾಡೇಡನ್ನು ಕಡಿಮೆ ಮಾಡುವ ಗುಣ ಬೆಟ್ಟದ ನೆಲ್ಲಿಕಾಯಿಯಲ್ಲಿ ಇದೆ. ಈ ಸಾರವು ಕಾಲಜನ್ ಉತ್ಪಾದನೆಗೆ ಅಗತ್ಯವಾದ ವಿಟಮಿನ್ ಎ ಯಲ್ಲಿ ಸಮೃದ್ಧವಾಗಿದೆ. ಇದು ಚರ್ಮವನ್ನು ಯೌವನವಾಗಿ ಮತ್ತು ಮೃದುವಾಗಿಡಲು ಸಹಾಯ ಮಾಡುವ ಕಾಯಿಯಾಗಿದೆ.
ದೇಶದಲ್ಲಿ ಸಿಗುವ ಬೆಟ್ಟದ ನೆಲ್ಲಿಕಾಯಿಯನ್ನು ಸಂಜೀವಿನಿಗೆ ಹೋಲಿಸಲಾಗುತ್ತದೆ. ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ಸೌಂದರ್ಯ ಮತ್ತು ಆರೋಗ್ಯ ವೃದ್ಧಿ ಸೇರಿದಂತೆ ಹತ್ತಾರು ಪ್ರಯೋಜನೆಗಳಿವೆ. ಆಯುರ್ವೇದದ ಪ್ರಕಾರ, ನೆಲ್ಲಿಕಾಯಿ ನಿಯಮಿತ ಸೇವನೆಯಿಂದ ಕೂದಲು ಉದುರುವಿಕೆ, ಆಸಿಡಿಟಿ, ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಬಹುದು. ಮಾತ್ರವಲ್ಲದೆ, ತೂಕ ಇಳಿಕೆಗೂ ಸಹಕಾರಿಯಾಗಿದ್ದು, ಥೈರಾಯ್ಡ್ ಮತ್ತು ಮಧುಮೇಹಕ್ಕೆ ನಿಯಂತ್ರಿಸುತ್ತದೆ. ದೃಷ್ಟಿ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಆಮ್ಲಾ ಎಂತಲೂ ಕರೆಯುವ ಈ ನೆಲ್ಲಿಕಾಯಿ ತಿಂದ್ರೆ ತಲೆಯಿಂದ ಪಾದದವರೆಗೆ ಲಾಭವಿದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ಪ್ರಯೋಜನಕಾರಿ ಮತ್ತು ವರ್ಷವಿಡೀ ಸೇವಿಸಬಹುದಾದರೂ, ಚಳಿಗಾಲದಲ್ಲಿ ಇದನ್ನು ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಒಂದು ನೆಲ್ಲಿಕಾಯಿಯನ್ನು ಸೇವಿಸುವುದು ಪುರುಷರ ಮತ್ತು ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದಾಗಿದೆ. ಮಾರುಕಟ್ಟೆಯಲ್ಲಿ ಬೆಟ್ಟದ ನೆಲ್ಲಿಕಾಯಿ ಸಿಗುತ್ತದೆ. ಹತ್ತು ಹಲವು ಉಪಯೋಗಗಳನ್ನು ಹೊಂದಿರುವ ಈ ಕಾಯಿ ತಿನ್ನುವುದನ್ನು ಮರೆಯಬೇಡಿ.
ಹಿಂದೂಸ್ತಾನ್ ಸಮಾಚಾರ್
