ಶ್ರೀನಿವಾಸ್ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ ಸಚಿವ ಕೆ.ಹೆಚ್.ಮುನಿಯಪ್ಪ
ಕೋಲಾರ /೨೪ ಅಕ್ಟೋಬರ್ (ಹಿ.ಸ) ; ಸೋಮವಾರ ಕೊಲೆಗೀಡಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಪಾರ್ಥೀವ ಶರೀರವನ್ನು ಶ್ರೀನಿವಾಸಪುರದ ಅವರ ಗೃಹದಲ್ಲಿ ಇರಿಸಲಾಗಿದೆ. ಬಂಧುಮಿತ್ರರು ಹಾಗೂ ಜನಪ್ರತಿನಿಧಿಗಳು ಸೋಮವಾರ ಬೆಳಿಗ್ಗೆಯಿಂದಲೇ ತೆರಳಿ ನಮನ ಸಲ್ಲಿಸಿದರು.
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಮೃತ ಶ್ರೀನಿವಾಸನ್ ಮನೆಗೆ ತೆರಳಿ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಹೆಚ್.ಮುನಿಯಪ್ಪ ರಾಜಕೀಯ ಬಿನ್ನಾಭಿಪ್ರಯಗಳು ಏನೇ ಇದ್ದರೂ ಅದನ್ನು ಪರಸ್ಪರ ಬಗೆಹರಿಸಿಕೊಳ್ಳಬೇಕು. ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ.
ಮೃತ ಶ್ರೀನಿವಾಸನ್ ಹಾಗೂ ನನಗೂ ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದವು. ಅವರನ್ನು ರಾಜಕೀಯವಾಗಿ ಎದರಿಸಿದ್ದೇನೆ. ಆ ನಂತರ ಶ್ರೀನಿವಾಸನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ದುರಂತ ಸಾವಿನಿಂದ ನನಗೆ ನೋವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಚಿತ್ರ : ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಕೊಲೆಗೀಡಾದ ಕಾಂಗ್ರೆಸ್ ಮುಖಂಡ ಶ್ರೀನಿವಾಸನ್ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು.
